ನವದೆಹಲಿ (PTI): ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಖಾಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ ಯುನೈಟೆಡ್ ಹಿಂದೂ ಫ್ರಂಟ್ ಸಂಘಟನೆ ನೇತೃತ್ವದಲ್ಲಿ ಭಾನುವಾರ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
0
samarasasudhi
ಸೆಪ್ಟೆಂಬರ್ 25, 2023
ನವದೆಹಲಿ (PTI): ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಖಾಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ ಯುನೈಟೆಡ್ ಹಿಂದೂ ಫ್ರಂಟ್ ಸಂಘಟನೆ ನೇತೃತ್ವದಲ್ಲಿ ಭಾನುವಾರ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಂಘಟನೆ ಮುಖ್ಯಸ್ಥ ಜೈ ಭಗವಾನ್ ಗೋಯಲ್ ನೇತೃತ್ವದಲ್ಲಿ ಪ್ರತಿಭಟನಕಾರರು, ಕೆನಡಾ ಮತ್ತು ಭಾರತದ ಪ್ರಧಾನ ಮಂತ್ರಿಗಳನ್ನು ಉದ್ದೇಶಿಸಿ ಬರೆದ ಪತ್ರವನ್ನು ಅಧಿಕಾರಿಗಳಿಗೆ ಸಲ್ಲಿಸಿದರು ಎಂದು ಹೇಳಿಕೆ ತಿಳಿಸಿದೆ.
'ಹಲವು ತಿಂಗಳುಗಳಿಂದ ಕೆನಡಾದ ಪ್ರಧಾನಿ ಭಾರತ ವಿರೋಧಿ ಖಾಲಿಸ್ತಾನಿಗಳನ್ನು ಬಹಿರಂಗವಾಗಿ ಬೆಂಬಲಿಸುತ್ತಿದ್ದಾರೆ ಮತ್ತು ರಕ್ಷಿಸುತ್ತಿದ್ದಾರೆ. ಭಾರತ ಸರ್ಕಾರದಿಂದ ಪದೇ ಪದೇ ಆಕ್ಷೇಪಣೆಗಳ ಹೊರತಾಗಿಯೂ, ಟ್ರುಡೊ ಪ್ರತಿಕ್ರಿಯಿಸಿಲ್ಲ' ಎಂದು ಗೋಯಲ್ ಹೇಳಿದರು.
' ಟ್ರುಡೊ ಅವರು ಭಾರತ ವಿರೋಧಿ ಖಾಲಿಸ್ತಾನಿಗಳನ್ನು ತುಂಬಾ ಪ್ರೀತಿಸುತ್ತಿದ್ದರೆ, ಅವರು ಕೆನಡಾದ ಒಂದು ಭಾಗವನ್ನು ಬಿಟ್ಟು ಹೊಸ ಖಾಲಿಸ್ತಾನಿ ರಾಷ್ಟ್ರವನ್ನು ಏಕೆ ರಚಿಸುವುದಿಲ್ಲ? ಅದನ್ನು ಗುರುತಿಸುವವರಲ್ಲಿ ನಾವು ಮೊದಲಿಗರಾಗುತ್ತೇವೆ' ಎಂದರು.