ಪೆರ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆದ್ರಂಪಳ್ಳ ಒಕ್ಕೂಟದ ನೇತೃತ್ವದಲ್ಲಿ ಮಣಿಯಂಪಾರೆ ಶ್ರೀದುರ್ಗಾಪರಮೇಶ್ವರಿ ಭಜನಾ ಮಂದಿರದ ಪರಿಸರದಲ್ಲಿ ನಾಡಹಬ್ಬ ಓಣಂ-2023 ಕಾರ್ಯಕ್ರಮವನ್ನು ವೈವಿಧ್ಯಮಯವಾಗಿ ಆಚರಿಸಲಾಯಿತು.
ಧ.ಗ್ರಾ.ಮಂಜೇಶ್ವರ ತಾಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷ ಟಿ.ಎಸ್. ಮೂಲ್ಯ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ bಜಿಟಂಕ್ ಪಂ.ಸದಸ್ಯ ಕೆ.ಪಿ.ಅನಿಲ್ ಕುಮಾರ್, ಮಂದಿರದ ಅಧ್ಯಕ್ಷ ಬಾಲಕೃಷ್ಣ ನಾಯ್ಕ, ಸ್ಥಾಪಕ ಸದಸ್ಯ ಗೋವಿಂದ ನಾಯ್ಕ ಅರೆಮಂಗಿಲ ಅತಿಥಿಗಳಾಗಿ ಪಾಲ್ಗೊಂಡರು. ಅಂಬಿಕಾ ಪ್ರಾರ್ಥನೆಗೈದರು. ವಲಯ ಮೇಲ್ವಿಚಾರಕಿ ಜಯಶ್ರೀ ಸ್ವಾಗತಿಸಿ ಸೇವಾ ಪ್ರತಿನಿಧಿ ರೇಖಾಜ್ಯೋತಿ ವಂದಿಸಿದರು. ಈ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘ ಹಾಗೂ ಪ್ರಗತಿಬಂಧು ಸಂಘದವರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು. ಮಧ್ಯಾಹ್ನ ಓಣಂ ಔತಣ ಕೂಟ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಅಬಕಾರಿ ಇಲಾಖೆಯ ಬದಿಯಡ್ಕ ವಲಯ ಸಹಾಯಕ ಅಧಿಕಾರಿ ಮೋಹನ್ ಕುಮಾರ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಯೋಜನೆಯ ಪೆರ್ಲ ವಲಯಾಧ್ಯಕ್ಷ ಶ್ರೀಧರ ಮಣಿಯಾಣಿ ಬಹುಮಾನ ವಿತರಣಾ ಸಭೆಯ ಅಧ್ಯಕ್ಷತೆವಹಿಸಿದ್ದರು. ಜನಜಾಗೃತಿ ವೇದಿಕೆ ಪೆರ್ಲ ವಲಯಾಧ್ಯಕ್ಷ ಬಿ.ಪಿ.ಶೇಣಿ, ಶೌರ್ಯ ವಿಪತ್ತು ನಿರ್ವಹಣಾ ಮಾಸ್ತರ್ ಸುರೇಂದ್ರ ಬಿ, ಧರ್ಮತ್ತಡ್ಕ ವಲಯಾಧ್ಯಕ್ಷ ಆಶೋಕ್ ಪೆರ್ಮುದೆ, ವಲಯ ಮೇಲ್ವಿಚಾರಕಿ ಜಯಶ್ರೀ ಸಭೆಯಲ್ಲಿ ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿ ಪುμÁ್ಪವತಿ ಸ್ವಾಗತಿಸಿ, ಕುಸುಮ ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.




.jpg)
.jpg)
.jpg)
.jpg)
