ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದ ಶರನ್ನವರಾತ್ರಿ ಆಮಂತ್ರಣ ಪತ್ರಿಕೆ ಬಿಡುಗಡೆ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಅಧ್ಯಕ್ಷ ವಾಮನ್ ರಾವ್ ಬೇಕಲ್ ಪ್ರಾರ್ಥನೆ ಸಲ್ಲಿಸಿ ಕ್ಷೇತ್ರದ ಪಾತ್ರಿಗಳಾದ ಪ್ರವೀಣ್ ನಾಯಕ್ ಪಾಂಗೋಡು ಅವರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಿ ಬಿಡುಗಡೆಗೊಳಿಸಿದರು. ನವೀನ್ ನಾಯಕ್ ನಾಗರಕಟ್ಟೆ, ಪ್ರಜ್ವಲ್ ನಾಯಕ್, ಅನಿಲ್ ರಾವ್ ಮಂಗಳೂರು, ಡಾ. ಮಂಜುಳಾ ರಾವ್, ಪ್ರದೀಪ್ ನಾಯಕ್ ನಾಗರಕಟ್ಟೆ, ಸಂಧ್ಯಾ ರಾಣಿ ಟೀಚರ್, ಅರ್ಚಕರಾದ ಕಿರಣ್ ಭಟ್, ಹರೀಶ್ ಕೂಡ್ಲು ಮುಂತಾದವರು ಉಪಸ್ಥಿತರಿದ್ದರು.




.jpg)
