ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎ. ಯು.ಪಿ ಶಾಲೆಯ ಸಂಚಾಲಕರಾಗಿದ್ದ ದಿ. ಯಂ ರಾಮಕೃಷ್ಣ ರಾವ್ ಇವರ18 ನೇ ಪುಣ್ಯ ತಿಥಿಯ ಸಂದರ್ಭದಲ್ಲಿ ಜರಗಿದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಯೋಗೀಶ್ ರಾವ್ ಚಿಗುರುಪಾದೆ ರಚಿಸಿ,ತುಳುನಾಡ ರತ್ನ ದಿನೇಶ್ ಅತ್ತಾವರ ನಿರ್ದೇಶಿಸಿ,ಅಬ್ಬಕ್ಕನಾಗಿ ನಟಿಸಿದ ಹಾಗೂ ಮಾಸ್ಟರ್ಸ್ ಮೀಯಪದವು ತಂಡದ ಸದಸ್ಯರು ಅಭಿನಯಿಸಿದ,ಉಳ್ಳಾಲ ರಾಣಿ ಅಬ್ಬಕ್ಕ ನೃತ್ಯ ರೂಪಕ ಕಾರ್ಯಕ್ರಮದ 16ನೇ ಪ್ರದರ್ಶನ ಜನಮನ ಸೂರೆಗೊಂಡಿತು.




