ಕಾಸರಗೋಡು: ಬ್ರಹ್ಮಶ್ರೀ ನಾರಾಯಣಗುರುಗಳ 169ನೇ ಜಯಂತ್ಯುತ್ಸವ ಜಿಲ್ಲೆಯ ವಿವಿಧೆಡೆ ಸಮಬ್ರಮದಿಂದ ಆಚರಿಸಲಾಯಿತು. ಕಾಸರಗೋಡು ಕರಂದಕ್ಕಾಡಿನ ಬಿಲ್ಲವ ಸೇವಾ ಮಂದಿರದಲಿಶ್ರೀ ನಾರಾಯಣ ಗುರು ಜಯಂತ್ಯುತ್ಸವದ ಅಂಗವಾಗಿ ಗಣಹೋಮ, ಭಜನೆ,ಗುರು ಪೂಜೆ ನಡೆಯಿತು.
ನೆಲ್ಲಿಕುಂಜೆ ಶ್ರೀ ಸಉಬ್ರಹ್ಮಣ್ಯ ದೆವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ನಾರಾಯಣಗುರು ಧರ್ಮ ಸೇವಾ ಸಂಘದ ಅಧ್ಯಕ್ಷ ಎನ್. ಸತೀಶ್ ಧ್ವಜಾರೋಹಣ ನಡೆಸಿದರು. ಮಹೇಶ ನೆಲ್ಲಿಕುಂಜೆ, ಗಣೇಶ್ ಪಾರಕಟ್ಟ, ಕೆ.ಎನ್ ವೆಂಕಟ್ರಮಣ ಹೊಳ್ಳ, ನಿರ್ಮಲಾ ಉಪೇಂದ್ರ, ಮುಕುಂದರಮೇಶ್ ಬಾಬು, ಸುಕೀರ್ತಿ, ಉಮೇಶ್, ಅವಿನಾಶ್ ಮೊದಲಾದವರು ಉಪಸ್ಥಿತರಿದ್ದರು.
ಅಡ್ಕತ್ತಬೈಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಮಂಜೇಶ್ವರ, ಹೊಸಂಗಡಿ ಸೇರಿದಂತೆ ಜಿಲ್ಲೆಯ ನಾನಾ ಕಡೆ ಶ್ರೀ ನಾರಾಯಣಗುರು ಜಯಂತಿಯನ್ನು ಆಚರಿಸಲಾಯಿತು.
ಕೂಡ್ಲು ಘಟಕದಿಂದ ಜಯಂತ್ಯುತ್ಸವ:
ಎಸ್.ಎನ್.ಡಿ.ಪಿ ಕೂಡ್ಲು ಶಾಖೆಯ ಆಶ್ರಯದಲ್ಲಿ ಚೂರಿ ವೀರಾಂಜನೇಯ ವ್ಯಾಯಾಮ ಶಾಲೆಯಲ್ಲಿ ನಡೆದ ಶ್ರೀ ನಾರಾಯಣ ಗುರು ಜಯಂತಯುತ್ಸವವನ್ನು ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ ಉದ್ಘಾಟಿಸಿದರು. ಎಸ್‍ಎನ್‍ಡಿಪಿ ಕೂಡ್ಲು ಶಾಖೆಯ ಅಧ್ಯಕ್ಷ ಕೃಷ್ಣನ್ ಪಾರಕಟ್ಟ ಅಧ್ಯಕ್ಷತೆ ವಹಿಸಿದ್ದರು. ಶಾಖೆ ವ್ಯಾಪ್ತಿಯÉುಸ್ಸೆಸೆಲ್ಸಿ, ಪ್ಲಸ್‍ಟು, ಪದವಿ, ಪಿ. ಜಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಎಸ್‍ಎನ್‍ಡಿಪಿ ನಿರ್ದೇಶಕ ವಕೀಲ ಪಿ. ಕೆ. ವಿಜಯನ್, ಒಕ್ಕೂಟದ ಕಾರ್ಯದರ್ಶಿ ಗಣೇಶ ಪಾರಕಟ್ಟ, ಮೋಹನನ್ ಮೀಪುಗುರಿ, ಪುಷ್ಪಾಕರನ್ ಮೀಪುಗುರಿ ಉಪಸ್ಥಿತರಿದ್ದರು.
: ಎಸ್‍ಎನ್‍ಡಿಪಿ ಕೂಡ್ಲು ಘಟಕದಲ್ಲಿ ನಡೆದ ಶ್ರೀನಾರಾಯಣಗುರು ಜಯಂತಿಯನ್ನು ಮಧೂರು ಗ್ರಾಪಂ ಅಧ್ಯಕ್ಷ ಕೆ. ಗೋಪಾಲಕೃಷ್ಣ ಉದ್ಘಾಟಿಸಿದರು.




