HEALTH TIPS

ಬಾಂಜತ್ತಡ್ಕದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ

                      ಬದಿಯಡ್ಕ: ಬಾಂಜತ್ತಡ್ಕ ಉದಯಗಿರಿ ಭಗತ್ ಸಿಂಗ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್‍ನ ವತಿಯಿಂದ ಭಾನುವಾರ ಉದಯಗಿರಿ ಶಾಲಾ ವಠಾರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದಿಂದ ಆಚರಿಸಲಾಯಿತು. ಖ್ಯಾತ ವೈದ್ಯ ಡಾ. ಶ್ರೀನಿಧಿ ಸರಳಾಯ ಬದಿಯಡ್ಕ ದೀಪಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಿದರು. ಅವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಹಬ್ಬಗಳ ಆಚರಣೆಯ ಮೂಲಕ ಯುವಕರು ಸಂಘಟಿತರಾಗುತ್ತಿರುವುದು ಗಮನಾರ್ಹ ವಿಚಾರವಾಗಿದೆ. ಶ್ರೀಕೃಷ್ಣನ ಬಾಲಲೀಲೆಗಳು ನಮ್ಮ ಜೀವನಕ್ಕೆ ಪಾಠವಾಗಿದೆ. ಪುರಾಣ ಕಥೆಗಳ ಆಳವನ್ನು ಅರಿತು ಮಕ್ಕಳಿಗೆ ಅದನ್ನು ತಿಳಿಸುವಂತಾಗಬೇಕು. ಇಂತಹ ಆಚರಣೆಗಳು ಮುಂದಿನ ಜನಾಂಗವನ್ನು ನಮ್ಮ ಸಂಸ್ಕøತಿಯತ್ತ ಕೊಂಡೊಯ್ಯಲು ಸಹಕಾರಿಯಾಗುತ್ತದೆ ಎಂದರು. 

                  ವಿವಿಧ ಸ್ಪರ್ಧೆಗಳಾದ ಜಾರುಕಂಬ, ಮೊಸರುಕುಡಿಕೆ, ಲಿಂಬೆ ಚಮಚ, ಲಕ್ಕೀಗೇಮ್, ಬಲೂನ್ ಒಡೆಯುವುದು ಮೊದಲಾದವುಗಳನ್ನು ಈ ಸಂದರ್ಭ ಆಯೋಜಿಸಲಾಯಿತು. ಮಧ್ಯಾಹ್ನ ಅನ್ನದಾನ ನಡೆಯಿತು.

           ಸಮಾರೋಪ ಸಮಾರಂಭ:

          ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉದಯಗಿರಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ರಶ್ಮಿ ಅಧ್ಯಕ್ಷತೆ ವಹಿಸಿದ್ದರು. ಪೆರಡಾಲ ಸÀರ್ಕಾರಿ ಶಾಲಾ ಅಧ್ಯಾಪಕ ರಾಜೇಶ್ ಉಬ್ರಂಗಳ ಮುಖ್ಯ ಅತಿಥಿಗಳಾಗಿ ಆಗಮಿಸಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಉದಯಗಿರಿ ಶಾಲಾ ಅಧ್ಯಾಪಕ ಶಿವರಾಮ ಶುಭಾಶಂಸನೆಗೈದರು. ಕ್ಲಬ್ ನ ಅಧ್ಯಕ್ಷ ಕೃಷ್ಣಕುಮಾರ್, ಜೊತೆ ಕಾರ್ಯದರ್ಶಿ ಅಭಿಲಾಷ್ ಉಪಸ್ಥಿತರಿದ್ದರು. ಕ್ಲಬ್ ನ ಮಾಜಿ ಅಧ್ಯಕ್ಷ ಸೀತಾರಾಮ ಸ್ವಾಗತಿಸಿ, ಕಾರ್ಯದರ್ಶಿ ವಸಂತ ಕುಮಾರ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries