ಬದಿಯಡ್ಕ: ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಸ್ಥಾಪಕ ಸುಬ್ರಹ್ಮಣ್ಯ ಶಾಸ್ತ್ರಿ ಜನ್ಮದಿನಾಚರಣೆ ಶಾಲೆಯಲ್ಲಿ ಜರಗಿತು. ಪೆರಡಾಲ ಎಜುಕೇಶನ್ ಸೊಸೈಟಿಯ ಕೋಶಾಧಿಕಾರಿ ವೆಂಕಟರಮಣ ಭಟ್ ಪೆರ್ಮುಖ ಮಾತನಾಡಿ ಪಿ.ಎಸ್. ಶಾಸ್ತ್ರಿ ಅವರು ಬದಿಯಡ್ಕ ಗಾಂಧಿ ಎಂದು ಪ್ರಸಿದ್ಧರಾಗಿದ್ದರು.. ವೈದ್ಯಕೀಯ, ಧಾರ್ಮಿಕ, ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಂಡು ಬದಿಯಡ್ಕ ಪ್ರದೇಶದಲ್ಲಿ ಜನಾನುರಾಗಿಯಾಗಿದ್ದರು. ಶಾಲೆ ನಿರ್ಮಿಸುವಲ್ಲಿ ಸ್ಥಳ ದಾನ ನೀಡಿದವರ ಪೆರಡಾಲ ಗುತ್ತು ಬಂಟ ಮನೆತನದವರ ಕೊಡುಗೆ ಕೂಡ ಅಪಾರವಾಗಿದೆ ಎಂದು ಅಭಿಪ್ರಾಯಪಟ್ಟರು.
ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಆಡಳಿತ ಮಂಡಳಿ ಸದಸ್ಯ ಕೃಷ್ಣ ಪ್ರಸಾದ್ ರೈ, ನೌಕರ ಸಂಘದ ಕಾರ್ಯದರ್ಶಿ ಪ್ರಭಾಕರ ನಾಯರ್ ಶುಭ ಹಾರೈಸಿದರು. ಅಧ್ಯಾಪಕ ವೃಂದ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯನಿ ಮಿನಿ. ಪಿ ಸ್ವಾಗತಿಸಿ, ನಿರಂಜನ ರೈ ಪೆರಡಾಲ ವಂದಿಸಿದರು.

.jpg)
.jpg)
