ಕಾಸರಗೋಡು: ಶಿಥಿಲಗೊಳ್ಳುತ್ತಿರುವ ಭಾರತೀಯ ಸಾಂಪ್ರದಾಯಿಕ ಕುಟುಂಬ ಜೀವನ ಪದ್ಧತಿಯನ್ನು ಪುನರುಜ್ಜೀವನಗೊಳಿಸಲು ಇಂದಿನ ಕಾಲಘಟ್ಟದಲ್ಲಿ ಕುಟುಂಬ ಸಂಗಮ ಕಾರ್ಯಕ್ರಮಗಳು ಅತ್ಯಂತ ಮಹತವದ್ದಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇರಳ ಪ್ರಾಂತ್ಯ ಪ್ರಚಾರಕ ಎ.ಸಿ. ಗೋಪಿನಾಥನ್ ತಿಳಿಸಿದ್ದಾರೆ.
ಅವರು ಕಾಸರಗೋಡು ತೈರೆ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದ ಸಂಭಾಂಗಣದಲ್ಲಿ ನಡೆದ ಭಾರತೀಯ ರಾಜ್ಯ ಪೆನ್ಷನರ್ಸ್ ಮಹಾ ಸಂಘದ ಕಾಸರಗೋಡು ಜಿಲ್ಲಾ ಕುಟುಂಬ ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು.
ಎಮರ್ಜೆನ್ಸಿ ವಿಕ್ಟಿಮ್ಸ್ ಅಸೋಸಿಯೇಶನ್‍ನ ಕೇರಳ ರಾಜ್ಯ ಕಾರ್ಯದರ್ಶಿ ವಿ.ರವೀಂದ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಘಟನೆಯ ಜಿಲ್ಲಾ ಅಧ್ಯಕ್ಷ ಎಂ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ದೇಶೀಯ ಸಮಿತಿ ಅಧ್ಯಕ್ಷ ಸಿ. ಎಚ್.ಸುರೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಪಿ. ಆರ್. ಮುರಳೀಧರನ್, ರಾಜ್ಯ ಕಾರ್ಯದರ್ಶಿ ಉಮಾದೇವಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸಿ.ಎಚ್. ಜಯೇಂದ್ರ ಸ್ವಾಗತಿಸಿದರು. ದೇಶೀಯ ಕೋಶಾಧಿಕಾರಿ ಕೆ.ದಯಾನಂದ ಮುಜುಂಗಾವು ವಂದಿಸಿದರು. ಕಾರ್ಯಕ್ರಮದಂಗವಾಗಿ ಕುಟುಂಬ ಸದಸ್ಯರಿಂದ ವಿವಿಧ ಕಲಾ ಸಾಂಸ್ಕøತಿಕ ಕಾರ್ಯಕ್ರಮ ಗಳು ಜರುಗಿತು.


