ಬದಿಯಡ್ಕ: ಮಿಲ್ಮಾ ಉತ್ತಮ ಗುಣಮಟ್ಟದ ಹಾಲು ಸಂಗ್ರಹಿಸಿ ನೀಡುವ ಸೊಸೈಟಿ ಪ್ರಶಸ್ತಿ ಜಿಲ್ಲೆಯಲ್ಲಿ ಈ ವರ್ಷ ಕುಂಬ್ಡಾಜೆ ಡೈರಿ ಸಹಕಾರಿ ಸಂಘಕ್ಕೆ ಲಭಿಸಿದೆ. ಕಾಞಂಗಾಡ್ ಡೈರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಿಲ್ಮಾ ನಿರ್ದೇಶಕರಾದÀ ಪಿ ಪಿ ನಾರಾಯಣನ್, ಕೆ ಸುಧಾಕರನ್ ಪ್ರಶಸ್ತಿಯನ್ನು ವಿತರಿಸಿದರು. ಮಿಲ್ಮಾ ಅಧ್ಯಕ್ಷ ಕೆ.ಎಸ್.ಮಣಿ ಹಾಗೂ ಕುಂಬ್ಡಾಜೆ ಡೈ|ರಿ ಸಹಕಾರಿ ಸಂಗಮದ ಆಡಳಿತ ಮಂಡಳಿ ಸದಸ್ಯರ ಅಧ್ಯಕ್ಷ ಫಾರೂಕ್ ಕುಂಬ್ಡಾಜೆ, ಕಾರ್ಯದರ್ಶಿ ಡಾ.ವೇಣುಗೋಪಾಲ್, ಉಪಾಧ್ಯಕ್ಷ ಉದಯಶಂಕರ ಭಟ್, ನಿರ್ದೇಶಕ ಅಬ್ದುಲ್ಲಾ ಗೋಳಿಕಟ್ಟೆ, ಚಂದ್ರಮತಿ, ಸುಜಾತಾ ಪ್ರಶಸ್ತಿ ಸ್ವೀಕರಿಸಿದರು. ಮ್ಯಾಥ್ಯೂ ವರ್ಗೀಸ್, ಜಾರ್ಜ್ ಕುಟ್ಟಿ, ಜಾಕೋಬ್, ಶಾಜಿ ಉಪಸ್ಥಿತರಿದ್ದರು. ಪಿ ಮುರಳಿ ಸ್ವಾಗತಿಸಿ, ಕೆ.ಸಿ.ಜೇಮ್ಸ್ ವಂದಿಸಿದರು. ಜಿಲ್ಲೆಯ ಹಾಲುತ್ಪಾದಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

.jpg)
