ಕೊಚ್ಚಿ: ಕೇರಳ ಹೈಕೋರ್ಟ್‍ನಲ್ಲಿ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಇಸದ ಘಟನೆ ನಡೆದಿದೆ. ತ್ರಿಶೂರ್ ಮೂಲದ ವಿಷ್ಣು ಎಂಬಾತ ತನ್ನ ಕೈಯ ರಕ್ತನಾಳವನ್ನು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಯುವಕನಿಗೆ ಸಂಬಂಧಿಸಿದ ಪ್ರಕರಣವನ್ನು ಹೇಬಿಯಸ್ ಕಾರ್ಪಸ್ ಕೋರ್ಟ್ ಪರಿಗಣಿಸುತ್ತಿರುವಾಗ ಈ ಘಟನೆ ನಡೆದಿದೆ. ಪೋಲೀಸರು ಮಧ್ಯ ಪ್ರವೇಶಿಸಿ ಯುವಕನನ್ನು ಆಸ್ಪತ್ರೆಗೆ ಕರೆದೊಯ್ದರು. ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ವರದಿಯಾಗಿದೆ.
ಪೂತೋಟ ಕಾನೂನು ಕಾಲೇಜಿನಲ್ಲಿ ಓದುತ್ತಿದ್ದ ಕಾನೂನು ವಿದ್ಯಾರ್ಥಿನಿ ಆಗಸ್ಟ್ 14 ರಿಂದ ನಾಪತ್ತೆಯಾಗಿದ್ದಳು. ನಂತರ ಪೋಷಕರು ನಡೆಸಿದ ತನಿಖೆಯಲ್ಲಿ ವಿವಾಹಿತನಾಗಿ ಮಗುವನ್ನು ಹೊಂದಿರುವ ತ್ರಿಶೂರ್ ಮೂಲದ ವಿಷ್ಣು ಜೊತೆ ಹೋಗಿರುವುದು ಪತ್ತೆಯಾಗಿದೆ. ನಂತರ ಬಾಲಕಿಯ ತಂದೆ ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದರು.
ಆದರೆ ನ್ಯಾಯಾಲಯದಲ್ಲಿ ಯುವಕನೊಂದಿಗೆ ತೆರಳುವುದಿಲ್ಲವೆಂದು ವಿದ್ಯಾರ್ಥಿನಿ ಹೇಳಿಕೆ ನೀಡಿದಳು. ಬಳಿಕ ಯುವತಿಯ ಬಟ್ಟೆಗಳಿದ್ದ ಬ್ಯಾಗ್ ನೀಡಲೆಂಬಂತೆ ಕೋರ್ಟ್ ಹೊರ ನಡೆಯುವ ಮಧ್ಯೆ ಯುವಕ ಬಾಗಿಲು ಬಳಿ ತಲುಪಿದ ತಕ್ಷಣ ಚಾಕುವಿನಿಂದ ಕೈ ಕತ್ತರಿಸಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೋಲೀಸರು ಮಧ್ಯ ಪ್ರವೇಶಿಸಿ ಯುವಕನನ್ನು ಆಸ್ಪತ್ರೆಗೆ ಸಾಗಿಸಿದರು.





