ಶಾಸ್ತಮಕೋಟ: ಕೇಂದ್ರದ ಸೂಚನೆ ಬೆನ್ನಲ್ಲೇ ರಾಜ್ಯದಲ್ಲಿ ಶಾಲಾ ಮಕ್ಕಳ ಗಣತಿ ಕಾರ್ಯ ಬಹುತೇಕ ಸಮರೋಪಾದಿಯಲ್ಲಿ ಕೊನೆಗೂ ಪೂರ್ಣಗೊಂಡಿದೆ ಎಂದು ವರದಿಯಾಗಿದೆ.
ರಜೆಯನ್ನೂ ಲೆಕ್ಕಿಸದೆ ಪ್ರತಿ ಶಾಲೆಯಲ್ಲೂ ಶಿಕ್ಷಕರು ಶ್ರಮವಹಿಸಿ ಈ ಕೆಲಸ ಮಾಡಿದ್ದಾರೆ. ಪೂರ್ವ ಪ್ರಾಥಮಿಕದಿಂದ ಹಿಡಿದು ಮಕ್ಕಳ ಸಮಗ್ರ ಮಾಹಿತಿಯನ್ನು ಪೋರ್ಟಲ್ ಗೆ ಸಲ್ಲಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯ ವರ್ಷದ ಹಿಂದೆಯೇ ನಿರ್ದೇಶನ ನೀಡಿದ್ದರೂ ರಾಜ್ಯ ಸÀರ್ಕಾರ ತಲೆ ಕೆಡಿಸಿಕೊಂಡಿರಲಿಲ್ಲ.
ಕೇಂದ್ರದ ಹಣ ಪಡೆಯುವ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ರಾಜ್ಯ ಸರ್ಕಾರ ಅಂತಿಮವಾಗಿ ಪೋರ್ಟಲ್‍ನಲ್ಲಿ ಮಾಹಿತಿಯನ್ನು ಅಪ್‍ಲೋಡ್ ಮಾಡಲು ಸಿದ್ಧತೆ ನಡೆಸಿತು. ಈ ನಿಟ್ಟಿನಲ್ಲಿ ಆ.16ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು ಶಾಲೆಗಳಿಗೆ ಪತ್ರ ಕಳುಹಿಸಿದಾಗ ಓಣಂ ರಜೆಯ ವೇಳೆ ಶಾಲೆಗೆ ಮಾಹಿತಿ ನೀಡಲು ಶಿಕ್ಷಕರು ಬರಬೇಕಾಯಿತು. ಗುರುವಾರದವರೆಗೆ ನೀಡಲಾಗಿದ್ದ ಗಡುವನ್ನು ಶನಿವಾರದವರೆಗೆ ವಿಸ್ತರಿಸಲಾಗಿತ್ತು. ಆದರೆ ಅಂತಹ ದಿನಗಳಲ್ಲಿ ಮಾಹಿತಿ ಸಲ್ಲಿಕೆ ಕಾರ್ಯಸಾಧ್ಯವಾಗಿರಲಿಲ್ಲ. ಇದರಿಂದ ಶಿಕ್ಷಕರು ರಜೆ ಮುಂದೂಡಿ ಕರ್ತವ್ಯಕ್ಕೆ ಹಾಜರಾದರು.
ಕೇಂದ್ರ ನಿಧಿ ಮತ್ತು ರಾಜ್ಯಗಳ ರೇಟಿಂಗ್‍ಗೆ ಈ ಡೇಟಾ ಆಧಾರವಾಗಿರುವುದರಿಂದ ತಕ್ಷಣ ಮಾಹಿತಿ ನೀಡಬೇಕು ಎಂದು ಸಮಗ್ರಶಿಕ್ಷ ಕೇರಳ ಹೇಳಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಗುರಿಯಾಗಿಟ್ಟುಕೊಂಡು ಕೇಂದ್ರವು 2030 ರ ವೇಳೆಗೆ ಶಾಲೆಗಳಲ್ಲಿ ಶೇಕಡಾ 100 ರಷ್ಟು ವಿದ್ಯಾರ್ಥಿಗಳ ದಾಖಲಾತಿಯನ್ನು ಮಾಡಲು ಮಕ್ಕಳ ಮಾಹಿತಿಯನ್ನು ಒದಗಿಸಬೇಕು ಎಂದು ಸೂಚಿಸಿತ್ತು. ಆದರೆ ರಾಜಕೀಯ ಕೆಸರೆರಚಾಟದಿಂದ ನಲುಗಿದ್ದ ರಾಜ್ಯದ ಎಡಗೈ ಶಿಕ್ಷಕರ ಸಂಘಗಳು ಇದನ್ನು ನಿರ್ಲಕ್ಷ್ಯಿಸಿ ದಾಷ್ಟ್ರ್ಯ ಮೆರೆದದ್ದರಿಂದ ಕೇಂದ್ರ ಸರ್ಕಾರದ ಅನುದಾನ ನೀಡದೆ ಹಿಂದೇಟು ಹಾಕಿತು. ಬಳಿಕ ಅಪಾಯ ಅರಿತು ಕೊನೆಗೂ ಮಾಹಿತಿ ನೀಡಲು ಮುಂದಾಯಿತು.





