HEALTH TIPS

ಔರಂಗಾಬಾದ್​ ಇನ್ಮುಂದೆ ಛತ್ರಪತಿ ಶಿವಾಜಿನರ!

               ಮುಂಬೈ: ಮುಖ್ಯಮಂತ್ರಿ ಏಕನಾಥ್​ ಸಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಔರಂಗಾಬಾದ್​ ಮತ್ತು ಉಸ್ಮಾನಾಬಾದ್​ ಜಿಲ್ಲೆಗಳ ಹೆಸರುಗಳನ್ನು ಕ್ರಮವಾಗಿ ಛತ್ರಪತಿ ಶಿವಾಜಿನಗರ ಮತ್ತು ಧಾರಾಶಿವ ಎಂದು ಮರುನಾಮಕರಣಗೊಳಿಸಿ ಆದೇಶ ಹೊರಡಿಸಿದೆ.

                ಕಳೆದ ಜುಲೈನಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ಜಿಲ್ಲೆಗಳ ಹೆಸರನ್ನು ಬದಲಾಯಿಸುವ ಬಗ್ಗೆ ಒಪ್ಪಿಗೆ ಪಡೆಯಲಾಗಿತ್ತು.

            ಹಾಗೆಯೇ ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಗಳನ್ನೂ ಆಹ್ವಾನಿಸಲಾಗಿತ್ತು. ಅದರಂತೆ ಔರಂಗಾಬಾದ್​ ಅನ್ನು ಛತ್ರಪತಿ ಶಿವಾಜಿನಗರವೆಂದೂ ಹಾಗೂ ಉಸ್ಮಾನಾಬಾದ್​ ಅನ್ನು ಧಾರಾಶಿವ ಎಂದು ಮರುನಾಮಕರಣಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

                ಔರಂಗಾಬಾದ್​ ಮತ್ತು ಉಸ್ಮಾನಾಬಾದ್​ ಹೆಸರುಗಳ ಮರುನಾಮಕಾರಣಕ್ಕೆ ಹಿಂದಿನ ಮಹಾ ವಿಕಾಸ ಅಡಿ (ಎಂವಿಎ) ಸರ್ಕಾರದ ಕ್ಯಾಬಿನೆಟ್​ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ರಾಜಕೀಯ ಬೆಳವಣಿಗೆಯಿಂದಾಗಿ 2022ರ ಜೂನ್​ 29ರಂದು ಅಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್​ ಠಾಕ್ರೆ ರಾಜೀನಾಮೆ ನೀಡಿದ್ದರು.

               'ಉದ್ಧವ್​ ಠಾಕ್ರೆ ಮಾಡಲಿಕ್ಕೆ ಆಗದ ಕೆಲಸವನ್ನು ನಮ್ಮ ಸರ್ಕಾರವು ಸಚಿವ ಸಂಪುಟದ ಪೂರ್ಣ ಬಹುಮತದೊಂದಿಗೆ ಕಾನೂನಾತ್ಮಕವಾಗಿ ಮಾಡಿದೆ' ಎಂದು ಸಿಎಂ ಏಕನಾಥ್​ ಸಿಂಧೆ ಮತ್ತು ಉಪಮುಖ್ಯಮಂತ್ರಿ ದೆವೇಂದ್ರ ಡ್ನವಿಸ್​ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries