HEALTH TIPS

ಬೊಕ್ಸಾನಗರ, ಧನಪುರ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು

                ಗರ್ತಲಾ: ತ್ರಿಪುರಾದ ಬೊಕ್ಸಾನಗರ ಮತ್ತು ಧನಪುರ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

               ಬೊಕ್ಸಾನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ತಫಜ್ಜಲ್ ಹುಸೇನ್ 30,237 ಮತಗಳ ಅಂತರದಿಂದ ಭರ್ಜರಿ ಗೆಲುವು ಗಳಿಸಿದ್ದಾರೆ.

                 ಹುಸೇನ್ 34,146 ಮತ್ತು ಪ್ರತಿಸ್ಪರ್ಧಿ ಸಿಪಿಐ(ಎಂ)ನ ಮಿಜಾನ್ ಹುಸೇನ್ 3,909 ಮತ ಗಳಿಸಿದ್ದಾರೆ.

               ಧನಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿಂದು ದೇಬನಾಥ್ 18,871 ಮತಗಳಿಂದ ಗೆದ್ದಿದ್ದಾರೆ. ದೇಬನಾಥ್ ಅವರು 30,017 ಮತ್ತು ಪ್ರತಿಸ್ಪರ್ಧಿ ಸಿಪಿಐ(ಎಂ)ನ ಕೌಶಿಕ್ ಚಂದಾ 11,146 ಮತಗಳನ್ನು ಗಳಿಸಿದ್ದಾರೆ.

                 ಮತದಾನದಂದು ನಡೆದ ಅಕ್ರಮವನ್ನು ಆರೋಪಿಸಿ ಮತ ಎಣಿಕೆಯನ್ನು ವಿರೋಧ ಪಕ್ಷ ಸಿಪಿಐ(ಎಂ) ಬಹಿಷ್ಕರಿಸಿತ್ತು.

                ಮತ್ತೊಂದೆಡೆ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಗೆಲುವು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ತ್ರಿಪುರಾವನ್ನು ಸಮೃದ್ಧ ರಾಜ್ಯವಾಗಿ ಪರಿವರ್ತಿಸುವ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries