ಬದಿಯಡ್ಕ: ಟೀಚರ್ಸ್ ಸ್ಪೋಟ್ರ್ಸ್ ಕೌನ್ಸಿಲ್ ಕಾಸರಗೋಡು ಇದರ ನೇತೃತ್ವದಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ ಸೀಸನ್ 5 ಬದಿಯಡ್ಕ ನವಜೀವನ ಶಾಲಾ ಮೈದಾನದಲ್ಲಿ ಎರಡು ದಿವಸಗಳ ಕಾಲ ಜರಗಿತು.
ಪೆರಡಾಲ ಕ್ಷೇತ್ರದ ಮೊಕ್ತೇಸರ ಜಗನ್ನಾಥ ರೈ ಪೆರಡಾಲ ಗುತ್ತು ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಶ್ರೀ ನವೀನ್ ಬನಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಸಮರೋಪ ಸಮಾರಂಭದ ಅಧ್ಯಕ್ಷತೆಯನ್ನ ಕೌನ್ಸಿಲ್ ನ ಅಧ್ಯಕ್ಷ ಸದಾಶಿವ ಬಾಲಮಿತ್ರ ವಹಿಸಿದರು. ಬದಿಯಡ್ಕ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪಿಜಿ. ಚಂದ್ರಹಾಸ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಬಹುಮಾನ ವಿತರಿಸಿದರು. ನವಜೀವನ ಶಾಲಾ ಅಧ್ಯಾಪಕ ರಾಜೇಶ್ ಮಾಸ್ತರ್, ಕೌನ್ಸಿಲ್ ಗೌರವ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಉದಯ ಸಾರಂಗ್, ಪ್ರಶಾಂತ್ ರೈ ಶುಭ ಹಾರೈಸಿದರು. ಉಪಾಧ್ಯಕ್ಷರಾದ ಅಶೋಕ್ ಕೊಡ್ಲಮೊಗರು, ಇಸ್ಮಾಯಿಲ್ ಮಾಸ್ತರ್ ಉಪಸ್ಥಿತರಿದ್ದರು. ಟೀಚರ್ಸ್ ಆರ್ಮಿ ಕಾಸರಗೋಡು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಕಿಂಗ್ಸ್ ಇಲೆವೆನ್ ಕಾಸರಗೋಡು ದ್ವಿತೀಯ ಸ್ಥಾನ ಪಡೆಯಿತು. ರಘು ರಾವ್, ಪ್ರಶಾಂತ್ ಮಾಸ್ತರ್ ಬೇಳ ನಿರ್ವಹಿಸಿದರು. ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು.


