ಕಾಸರಗೋಡು: ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಮಾಸ್ಟರ್ ಅಣಂಗೂರ್ ಅವರ ಶ್ರದ್ದಾಂಜಲಿ ಸಭೆ ಹಾಗೂ ಇವರ ಜೀವನ ಚರಿತ್ರೆ "ಸಮಾಜ ಸಂಪದ "ಎಂಬ ಪುಸ್ತಕ ವಿತರಣೆ ಸಮಾರಂಭ ಅನಂಗೂರಿನ ಶ್ರೀ ಶಾರದಾಂಬಾ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆಯಿತು.
ರಾಮರಾಜ ಕ್ಷತ್ರಿಯ ಜಿಲ್ಲಾ ಸಂಘದ ಗೌರವಧ್ಯಕ್ಷ, ಸಾರಿಗೆ ಉದ್ಯಮಿ ನಿರಂಜನ್ ಕೊರಕೋಡ್ ಬಾಲಕೃಷ್ಣ ಮಾಸ್ಟರ್ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೃತಿಕರ್ತ ರವಿನಾಯ್ಕಪು 'ಸಮಾಜ ಸಂಪದ' ಕೃತಿಯ ಬಗ್ಗೆ ವಿವರಣೆ ನೀಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಕೆ.ಎಂ ಹೆರಳ ಮಾಸ್ಟರ್, ಬಾಲಕೃಷ್ಣ ಮಾಸ್ಟರ್ ರ ಶಿಷ್ಯೆ ಜಲಜಾಕ್ಸಿ ಟೀಚರ್, ಪೆÇ್ರ. ಎ ಶ್ರೀನಾಥ್, ಪೆÇ್ರ ಶೈಲಾ ಪ್ರಕಾಶಚಂದ್ರ ನುಡಿನಮನ ಸಲ್ಲಿಸಿದರು. ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಜಿಲ್ಲಾ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ, ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು, ಕೋಶಾಧಿಕಾರಿ ಸತೀಶ್ ಮಾಸ್ಟರ್ ಕೂಡ್ಲು, ಶಾರದಾಂಬ ಮಂದಿರ ಸಮಿತಿ ಅಧ್ಯಕ್ಷ, ಹಾಗೂ ಅಣಂಗೂರು ಉಪಸಂಘ ಅಧ್ಯಕ್ಷ ಕಮಲಾಕ್ಷ ಅಣಂಗೂರ್ ಉಪಸ್ಥಿತರಿದ್ದರು. ವಾಮನ್ ರಾವ್ ಬೇಕಲ್ ಸ್ವಾಗತಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರ್ವಹಿಸಿದರು. ಪ್ರದೀಪ್ ಬೇಕಲ್ ವಂದಿಸಿದರು.


