ಕಾಸರಗೋಡು: ಪರಿಶಿಷ್ಟಜಾತಿ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಕಾಞಂಗಾಡ್ ಬ್ಲಾಕ್ ಪರಿಶಿಷ್ಟಜಾತಿ ಅಭಿವೃದ್ಧಿ ಕಛೇರಿಯ ವ್ಯಾಪ್ತಿಯ ಚೆಂಗರ ಕಾಲಿಯಡ್ಕ ಕಾಲನಿಯ ವಿಜ್ಞಾನವಾಡಿಯ ಕಾರ್ಡಿನೇಟರ್ ನೇಮಕಾತಿಗಾಗಿ ಸಂದರ್ಶನ ಸೆಪ್ಟೆಂಬರ್ 8 ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಕಛೇರಿಯಲ್ಲಿ ನಡೆಯಲಿದೆ.
ಪುಲ್ಲೂರು-ಪೆರಿಯ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ 21-45 ವರ್ಷ ವಯಸ್ಸಿನ ಪ್ಲಸ್ ಟು ಉತ್ತೀರ್ಣರಾದ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರುವ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು. ನೇಮಕಾತಿ ಒಂದು ವರ್ಷ ಕಾಲಾವಧಿಯದ್ದಾಗಿದ್ದು, ಪ್ರತಿ ತಿಂಗಳು 8,000 ರೂಪಾಯಿ ಗೌರವಧನವಾಗಿ ನೀಡಲಾಗುವುದು. ಆಸಕ್ತಿಯಿರುವವರು ಅರ್ಹತೆ, ಜಾತಿ, ನೆಟಿವಿಟಿ, ವಯಸ್ಸು ಸಾಬೀತುಪಡಿಸುವ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994 256162, 9497380939) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

