ಸಮರಸ ಚಿತ್ರಸುದ್ದಿ: ಮಧೂರು: ಎಡನೀರು ಮಠದ ಸಮಾರಂಭದಲ್ಲಿ ಪಾಲ್ಗೊಳ್ಳು ಆಗಮಿಸಿದ್ದ ಸುಪ್ರೀಂಕೋರ್ಟು ನ್ಯಾಯಾಧೀಶ, ನ್ಯಾಯಮೂರ್ತಿ ಸರಸ ವೆಂಕಟನಾರಾಯಣ ಭಟ್ಟಿ ಶನಿವರ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಸಪತ್ನೀಕರಾಗಿ ಭೇಟಿನೀಡಿ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮುಖ್ಯ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ಇವರಿಗೆ ಶ್ರೀದೇವರ ಪ್ರಸಾದ ನೀಡಿ ಹರಸಿದರು. ದೇವಸ್ಥಾನದ ಹಿರಿಯ ಅಧಿಕಾರಿ ಸಉಬ್ರಹ್ಮಣ್ಯ, ಜೀರ್ಣೋದ್ದಾರ ಸಮಿತಿ ಸದಸ್ಯ ಮುರಳಿ ಗಟ್ಟಿ, ವಕೀಲ ಅನಂತರಾಮ, ಗಿರೀಶ್ ಕಾಸರಗೋಡು ದೇವಸ್ಥಾನ ಸಿಬ್ಬಂದಿ ಮಧ್ಯಸ್ಥ ಉಪಸ್ಥಿತರಿದ್ದು ಸ್ವಾಗತಿಸಿದರು.




