ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯ ಪ್ರೊಫೈಲ್‌ನಲ್ಲಿ ಜಿ20 ಶೃಂಗಸಭೆ ನಡೆಯುತ್ತಿರುವ 'ಭಾರತ ಮಂಟಪ'ವನ್ನು ಡಿಸ್‌ಪ್ಲೇ ಪಿಕ್ಚರ್ ಆಗಿ ಬದಲಾಯಿಸಿದ್ದಾರೆ.
0
samarasasudhi
ಸೆಪ್ಟೆಂಬರ್ 08, 2023
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯ ಪ್ರೊಫೈಲ್‌ನಲ್ಲಿ ಜಿ20 ಶೃಂಗಸಭೆ ನಡೆಯುತ್ತಿರುವ 'ಭಾರತ ಮಂಟಪ'ವನ್ನು ಡಿಸ್‌ಪ್ಲೇ ಪಿಕ್ಚರ್ ಆಗಿ ಬದಲಾಯಿಸಿದ್ದಾರೆ.
ಚಿತ್ರವು ಪ್ರಕಾಶಮಾನವಾಗಿ ಬೆಳಗುತ್ತಿರುವ ಭಾರತ ಮಂಟಪವನ್ನು ಪ್ರದರ್ಶಿಸುತ್ತಿದ್ದು, ಮಂಟಪದ ಮುಂದೆ ನಟರಾಜ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ತ್ರಿವರ್ಣ ಧ್ವಜವನ್ನು ಹೊಂದಿದ್ದ ಪ್ರಧಾನಿ ಮೋದಿ ಅವರ ಪ್ರೊಫೈಲ್ ಚಿತ್ರವು ಈಗ ಮೋದಿಯವರು ನಮಸ್ಕರಿಸುತ್ತಿರುವ ಚಿತ್ರಕ್ಕೆ ಬದಲಾಗಿದೆ.
ಸೆಪ್ಟೆಂಬರ್ 9 ಮತ್ತು 10ರಂದು ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಶೃಂಗಸಭೆಯಲ್ಲಿ ಭಾಗವಹಿಸಲು ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ ಹಾಗೂ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ದಂಪತಿ, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಅನೇಕ ನಾಯಕರು ಈಗಾಗಲೇ ಭಾರತಕ್ಕೆ ಆಗಮಿಸಿದ್ದಾರೆ.