HEALTH TIPS

ವಿಚ್ಛೇದನ | ವ್ಯಕ್ತಿ ಅನುಭವಿಸುವ ಕ್ರೌರ್ಯ ಪರಿಗಣಿಸಬೇಕು- ಸುಪ್ರೀಂ ಕೋರ್ಟ್‌

                ವದೆಹಲಿ: ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನ ಕೋರಿದ ಪ್ರಕರಣಗಳಲ್ಲಿ ಕ್ರೌರ್ಯದ ವಿಚಾರವಾಗಿ ವಸ್ತುನಿಷ್ಠವಾಗಿ ಆಲೋಚಿಸುವುದಕ್ಕಿಂತಲೂ ಅದನ್ನು ಅನುಭವಿಸುವ ವ್ಯಕ್ತಿಯ ದೃಷ್ಟಿಯಿಂದ ಅವಲೋಕಿಸುವುದು ಮುಖ್ಯ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

             ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ಎಂ.ಎಂ.ಸುಂದರೇಶ್ ಅವರಿದ್ದ ನ್ಯಾಯಪೀಠ, ವಿಚ್ಛೇದನ ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿತು.

                 'ಪ್ರಕರಣವೊಂದರಲ್ಲಿ, ಒಬ್ಬ ಮಹಿಳೆ ಪಾಲಿಗೆ ಕ್ರೌರ್ಯ ಎನಿಸುವುದು ಪುರುಷನಿಗೆ ಕ್ರೌರ್ಯವಾಗಲಿಕ್ಕಿಲ್ಲ. ಅದರಲ್ಲೂ ವಿಚ್ಛೇದನ ಕೋರಿ ಪತ್ನಿ ಅರ್ಜಿ ಸಲ್ಲಿಸಿದ ಪ್ರಕರಣದಲ್ಲಿ ಸಮಗ್ರ ಅವಲೋಕನ ಅಗತ್ಯ' ಎಂದು ನ್ಯಾಯಪೀಠ ಹೇಳಿದೆ.

                  ಕಕ್ಷಿಗಾರರು 15 ವರ್ಷಗಳ ಕಾಲ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಪರಸ್ಪರರತ್ತ ಗಂಭೀರ ಆರೋಪಗಳನ್ನೂ ಅವರು ಮಾಡಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ದಂಪತಿಗೆ ವಿಚ್ಛೇದನ ನೀಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries