ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಹಿಂದಿ ದಿನಾಚರಣೆ ಶನಿವಾರ ಮಂಜೇಶ್ವರ ಎಸ್.ಎ.ಟಿ. ಶಾಲೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಯು ಪಿ, ಹೈಸ್ಕೂಲು ಮತ್ತು ಹೈಯರ್ ಸೆಕೆಂಡರಿ ವಿಭಾಗದ ಮಕ್ಕಳಿಗಾಗಿ ಕವಿತಾ ಆಲಾಪನೆ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಯಿತು. ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ, ಎಸ್.ಎ.ಟಿ ಶಾಲೆಯ ಹಿರಿಯ ಅಧ್ಯಾಪಕಿ ಶಾಂತೇರಿ ಕಿಣಿ ಅಧ್ಯಕ್ಷತೆ ವಹಿಸಿ, ವಿಜೇತರನ್ನು ಅಭಿನಂದಿಸಿ, ಶುಭ ಹಾರೈಸಿದರು.
ನಿವೃತ್ತ ಹಿಂದಿ ಅಧ್ಯಾಪಕಿ ವಾರಿಜಾ ಮುಖ್ಯ ಅತಿಥಿಗಳಾಗಿ ಹಿಂದಿ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ಮಂಜೇಶ್ವರ ಉಪಜಿಲ್ಲಾ ಹಿಂದಿ ಅಧ್ಯಾಪಕ್ ಮಂಚ್ ನ ಅಧ್ಯಕ್ಷೆ ಸ್ವಪ್ನ, ಉಪಾಧ್ಯಕ್ಷ ರಾಮಚಂದ್ರ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು. ಕುಮಾರಿ ಸ್ಪೂರ್ತಿ ಪ್ರಾರ್ಥನೆ ಹಾಡಿದರು. ಸುಕನ್ಯಾ ಟೀಚರ್ ಸ್ವಾಗತಿಸಿ, ನಿರೂಪಿಸಿದರು. ಲಕ್ಷ್ಮೀಶ್ ಮಾಸ್ತರ್ ವಂದಿಸಿದರು.

.jpg)
