ಕಾಸರಗೋಡು: ಚೀಮೇನಿಯಲ್ಲಿರುವ ಕಾಲೇಜ್ ಆಫ್ ಇಂಜಿನಿಯರಿಂಗ್ ತೃಕರಿಪುರದಲ್ಲಿ ಕಂಪ್ಯೂಟರ್ ಸಯನ್ಸ್ ಆಂಡ್ ಇಂಜಿನಿಯರಿಂಗ್ ಬ್ರಾಂಚ್ ನಲ್ಲಿ ತಾತ್ಕಾಲಿಕ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ ತೆರವಾಗಿದ್ದು, ಗಂಟೆಯ ವೇತನದ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ವಯಸ್ಸು, ವಿದ್ಯಾಭ್ಯಾಸ ಯೋಗ್ಯತೆ (ಪಿ.ಜಿ., ನೆಟ್), ಕೆಲಸದ ಅನುಭವ ಮುಂತಾದವುಗಳನ್ನು ಸಾಬೀತುಪಡಿಸುವ ಮೂಲ ಪ್ರಮಾಣಪತ್ರಗಳು, ಬಯೋಡಾಟಾ ಸಹಿತ ಸೆಪ್ಟೆಂಬರ್ 26 ರಂದು ಬೆಳಿಗ್ಗೆ 10.30ಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು. ಕೆಲಸದ ಅನುಭವ ಕಡ್ಡಾಯವಾಗಿದ್ದು, ಹೆಚ್ಚಿನ ಮಾಹಿತಿಗಾಗಿದ್ದು, ಈಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (0467 2250377, 9495646060)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

