HEALTH TIPS

ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಕೇರಳೀಯಂಗೆ 27 ಕೋಟಿ 12 ಲಕ್ಷ ಮಂಜೂರು!

                ತಿರುವನಂತಪುರ: ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರವಾಗಿದ್ದು, ಕೇಂದದ್ರ ನಿಲುವುಗಳೇ ಇದಕ್ಕೆ ಕಾರಣ ಎಂಬ ರಾಜ್ಯ ಸರ್ಕಾರದ ಆರೋಪದ ನಡುವೆಯೇ ನ.1ರಿಂದ ನಡೆಯಲಿರುವ ಕೇರಳೀಯಂ ಕಾರ್ಯಕ್ರಮಕ್ಕೆ ಕೋಟಿಗಟ್ಟಲೆ ಖರ್ಚು ಮಾಡಲಾಗುತ್ತಿದೆ.

                    ಮೂಲಸೌಕರ್ಯ ಅಭಿವೃದ್ಧಿ ನೆಪದಲ್ಲಿ ಕಿಫ್ಬಿಯಿಂದಲೂ ಹಣ ತೆಗೆಯಲಾಗಿದೆ. ಇದಲ್ಲದೇ ಪ್ರಾಯೋಜಕರಿಂದ ಹಣ ಪಡೆದು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎನ್ನುತ್ತಿದೆÉ ಸÀರ್ಕಾರ.

               ಕೇರಳೀಯ ಮುಂದಿಟ್ಟುಕೊಂಡು ಹಣಕಾಸು ಇಲಾಖೆ 27 ಕೋಟಿ 12 ಲಕ್ಷ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಹಣದ ಕೊರತೆ ಮತ್ತು ಖಜಾನೆ ನಿಯಂತ್ರಣಗಳಿಂದ ಇದಕ್ಕೆ ಅಡ್ಡಿಯಾಗಲಿಲ್ಲ.

             ಕೇರಳಿಯಮ್ ಕಾರ್ಯಕ್ರಮವು ಮುಖ್ಯವಾಗಿ ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತದೆ. ಪ್ರದರ್ಶನಕ್ಕಾಗಿ ಅತಿ ಹೆಚ್ಚು ಮೊತ್ತವನ್ನು ನಿಗದಿಪಡಿಸಲಾಗಿದೆ - 9.39 ಕೋಟಿ.ರೂ. ದೀಪಾಲಂಕಾರಕ್ಕೆ 2 ಕೋಟಿ 97 ಲಕ್ಷ ರೂ. ಪ್ರಚಾರಕ್ಕಾಗಿ 3 ಕೋಟಿ 98 ಲಕ್ಷ ರೂ. ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲು 3 ಕೋಟಿ 14 ಲಕ್ಷ ರೂ.ಮೀಸಲಿಡಲಾಗಿದೆ.

            ಸ್ಟೇಜ್ ಆಧುನೀಕರಣ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಲು ಕೆಐಎಫ್‍ಬಿ ನಿಧಿಯಿಂದ ಹಂಚಿಕೆಯನ್ನು ಪಡೆದುಕೊಳ್ಳಲಿದೆ. ಆರಂಭಿಕ ಮಂಜೂರಾದ ಮೊತ್ತವು ಆರಂಭಿಕ ವೆಚ್ಚಗಳಿಗೆ ಮಾತ್ರ ಬಳಸಲಾಗುತ್ತದೆ.

           ದಿನನಿತ್ಯದ ಖರ್ಚಿಗೂ ರಾಜ್ಯದಲ್ಲಿ ಹಣವಿಲ್ಲ ಎಂದು ಸರ್ಕಾರ ಹೇಳುತ್ತಿದೆ. ನವೆಂಬರ್ 1 ರಿಂದ 7 ರವರೆಗೆ ರಾಜಧಾನಿಯಲ್ಲಿ ಮಾತ್ರ ಕೇರಳೀಯಂ ಆಯೋಜಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries