HEALTH TIPS

ಗುಜರಾತ್‌: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಸಂಖ್ಯೆ 31 ಲಕ್ಷ: ಸಚಿವ ಖಾಬಡ್

                 ಹಮದಾಬಾದ್: 'ಗುಜರಾತ್‌ನಲ್ಲಿ ಸುಮಾರು 31 ಲಕ್ಷ ಕುಟುಂಬಗಳು ಬಡತನ ರೇಖೆ (ಬಿಪಿಎಲ್) ಗಿಂತ ಕೆಳಗಿವೆ. ಗ್ರಾಮೀಣ ಭಾಗದಲ್ಲಿರುವ ಬಿಪಿಎಲ್ ಕುಟುಂಬಗಳ ಮಾಸಿಕ ಆದಾಯ ಸರಾಸರಿ ₹ 816 ಹಾಗೂ ನಗರ ಪ್ರದೇಶಗಳಲ್ಲಿ ₹ 1 ಸಾವಿರದಷ್ಟಿದೆ' ಎಂದು ಗುಜರಾತ್ ಗ್ರಾಮೀಣಾಭಿವೃದ್ಧಿ ಸಚಿವ ಬಚ್ಚುಬಾಯಿ ಮಾಘನ್‌ಬಾಯಿ ಖಾಬಡ್‌ ಹೇಳಿದ್ದಾರೆ.

             ಕಾಂಗ್ರೆಸ್‌ ಶಾಸಕ ತುಷಾರ್ ಚೌಧರಿ ಅವರು ಸೆ. 14ರಂದು ಕೇಳಿದ ಪ್ರಶ್ನೆಗೆ ಉತ್ತರ ರೂಪದಲ್ಲಿ ಮಾಹಿತಿ ನೀಡಿರುವ ಅವರು, 'ಗುಜರಾತ್‌ನ ಗ್ರಾಮೀಣ ಭಾಗದ ಕುಟುಂಬಗಳ ಪ್ರತಿ ದಿನದ ಆದಾಯ ₹ 26ರಷ್ಟು ಇದ್ದರೆ, ನಗರ ಪ್ರದೇಶದಲ್ಲಿ ₹ 32ರಷ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಬಿಪಿಎಲ್‌ ಕುಟುಂಬಗಳ ಒಟ್ಟು ಸಂಖ್ಯೆ 31,61,310 ರಷ್ಟಿದೆ ಎಂದು ರಾಜ್ಯ ಸರ್ಕಾರ ಗುರುತಿಸಿದೆ. ಇದರಲ್ಲಿ 16,28,744 ಕುಟುಂಬಗಳು ಕಡು ಬಡತನದಲ್ಲಿವೆ' ಎಂದಿದ್ದಾರೆ.

                2020-21ರಲ್ಲಿ 1,047 ಕುಟುಂಬಗಳು ಬಡತನ ರೇಖೆಗೆ ಕುಸಿದಿವೆ. ಆದರೆ ಇದೇ ವೇಳೆ 14 ಕುಟುಂಬಗಳು ಬಿಪಿಎಲ್‌ನಿಂದ ಹೊರ ಬಂದಿವೆ. 2021-22ರಲ್ಲಿ ಬಿಪಿಎಲ್‌ನಿಂದ ಕೆಳಗೆ ಕುಸಿದ ಕುಟುಂಬಗಳ ಸಂಖ್ಯೆ 1,751. ಇದೇ ವರ್ಷದಲ್ಲಿ ಬಿಪಿಎಲ್‌ನಿಂದ ಹೊರ ಬಂದಿದ್ದು 2 ಕುಟುಂಬಗಳು ಮಾತ್ರ. 2022-23ನೇ ಸಾಲಿನಲ್ಲಿ 303 ಕುಟುಂಬಗಳು ಬಿಪಿಎಲ್‌ ಕುಟುಂಬಗಳಾದರೆ, ಒಂದು ಕುಟುಂಬ ಮಾತ್ರ ಮೇಲೆ ಏರಿದೆ. ಹೀಗಾಗಿ ಕಳೆದ ಮೂರು ವರ್ಷಗಳಲ್ಲಿ 3,101 ಕುಟುಂಬಗಳು ಬಡತನ ರೇಖೆಗಿಂತ ಕೆಳಗೆ ಕುಸಿದಿವೆ.

               ರಾಜ್ಯದ ಬನಾಸಕಂಠ ಜಿಲ್ಲೆಯಲ್ಲಿ ಅತಿ ಹೆಚ್ಚು 2,37,078 ಬಿಪಿಎಲ್ ಕುಟುಂಬಗಳಿವೆ. ದಾಹೋದ್ ಜಿಲ್ಲೆಯಲ್ಲಿ 2,25,520 ಕುಟುಂಬಗಳು ಹಾಗೂ ಪೋರಬಂದರ್ ಜಿಲ್ಲೆಯಲ್ಲಿ ಕಡಿಮೆ 21,065 ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ.

               ರಾಜ್ಯದ ಇತರ 11 ಜಿಲ್ಲೆಗಳಲ್ಲಿ ತಲಾ ಒಂದು ಲಕ್ಷ ಬಿಪಿಎಲ್ ಕುಟುಂಬಗಳಿವೆ. ಗುಜರಾತ್‌ನ ಕೇಂದ್ರ ಭಾಗದಲ್ಲಿರುವ ಖೇಡಾ ಹಾಗೂ ಆನಂದ್ ಜಿಲ್ಲೆಗಳಲ್ಲಿ ಕ್ರಮವಾಗಿ 1.56 ಲಕ್ಷ ಹಾಗೂ 1.53 ಲಕ್ಷ ಬಿಪಿಎಲ್ ಕುಟುಂಬಗಳಿವೆ. ರಾಜ್ಯದ ಒಟ್ಟು 33 ಜಿಲ್ಲೆಗಳಲ್ಲಿ ಐದು ಜಿಲ್ಲೆಗಳು ಅತಿ ಹೆಚ್ಚು ಬಿಪಿಎಲ್ ಕುಟುಂಬಗಳನ್ನು ಹೊಂದಿವೆ ಎಂದು ವಿಧಾನಸಭೆಯಲ್ಲಿ ಖಾಬಡ್‌ ಹೇಳಿದ್ದಾರೆ.

             ಇದರಲ್ಲಿ ಪಂಚಮಹಲ್‌ ಜಿಲ್ಲೆಯಲ್ಲಿ 1.27 ಲಕ್ಷ, ವಾಲ್ಸದ್‌- 1.26 ಲಕ್ಷ, ಸುರೇಂದ್ರನಗರ- 1.25 ಲಕ್ಷ, ವಡೋದರ- 1.21 ಲಕ್ಷ, ಸೂರತ್ 1.14 ಲಕ್ಷ, ಮೆಹಸಾನ- 1.06 ಲಕ್ಷ, ಖಚ್‌- 1.05 ಲಕ್ಷ ಹಾಗೂ ಪಠಾಣ್‌ ಜಿಲ್ಲೆಯಲ್ಲಿ 1.02 ಲಕ್ಷ ಬಿಪಿಎಲ್ ಕುಟುಂಬಗಳಿವೆ.

                  ನರ್ಮದಾ, ಪಂಚಮಹಲ್, ಚೋಟಾ ಉದೇಪುರ್, ವಡೋದರ ಹಾಗೂ ತಾಪಿ ಒಳಗೊಂಡ ಗುಜರಾತ್‌ನ ಐದು ಜಿಲ್ಲೆಗಳಲ್ಲಿ ಬಿಪಿಎಲ್ ಕುಟುಂಬಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ವಲಸೆ ಬಂದವರ ಸಂಖ್ಯೆಯೇ ಹೆಚ್ಚು ಇರುವ ಸೂರತ್‌ನಲ್ಲಿ ಒಂದೇ ಒಂದು ಕುಟುಂಬ ಮಾತ್ರ ಬಿಪಿಎಲ್‌ನಿಂದ ಹೊರಬಂದಿದೆ. ಆದರೆ ಇಲ್ಲಿ ಬಿಪಿಎಲ್‌ಗೆ ಕುಸಿದ ಜಿಲ್ಲೆಗಳಲ್ಲಿ ಮಹಿಸಾಗರ್‌ನಲ್ಲಿ ಮೂರು, ಪಠಾಣ್‌ನಲ್ಲಿ ಆರು ಹಾಗೂ ಗಾಂಧಿನಗರದಲ್ಲಿ ಏಳು ಮತ್ತು ಖೇಡಾ ಜಿಲ್ಲೆಯಲ್ಲಿ 12 ಕುಟುಂಬಗಳು ಬಡತನ ರೇಖೆಗಿಂತ ಕೆಳಕ್ಕೆ ಕುಸಿದಿವೆ.

                   ಕಳೆದ ಎರಡು ವರ್ಷಗಳಲ್ಲಿ ಅಹಮದಾಬಾದ್‌ನಲ್ಲಿ 437 ಕುಟುಂಬಗಳು ಬಿಪಿಎಲ್‌ನಿಂದ ಹೊರ ಬಂದಿವೆ ಎಂದು ಸರ್ಕಾರ ಹೇಳಿದೆ. 2016-17ರಲ್ಲಿ ರಾಜ್ಯದಲ್ಲಿ 18,932 ಕುಟುಂಬಗಳು ಬಡತನ ರೇಖೆಗೆ ಸೇರಿವೆ. ಅಮ್ರೇಲಿ ಜಿಲ್ಲೆಯಲ್ಲಿ 4,248 ಕುಟುಂಬಗಳು ಬಿಪಿಎಲ್‌ಗೆ ಕುಸಿದಿವೆ.

                 'ರಾಜ್ಯ ಅಭಿವೃದ್ಧಿ ಹೊಂದಿದೆ ಎಂದರೆ ಬಡತನ ನಿರ್ಮೂಲನೆ ಆಗಿರಬೇಕು. ಆದರೆ ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಬಿಪಿಎಲ್‌ ಕುಟುಂಬಗಳ ಸರಾಸರಿ ಸಂಖ್ಯೆ ಪ್ರತಿ ನಿತ್ಯ ಶೇ 26ರಷ್ಟು ಹೆಚ್ಚಾಗುತ್ತಿದೆ' ಎಂದು ಕಾಂಗ್ರೆಸ್ ಆರೋಪಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries