HEALTH TIPS

ಫ್ಲಿಪ್‌ಕಾರ್ಟ್‌ ಜಾಹೀರಾತು: ನಟ ಅಮಿತಾಬ್ ಬಚ್ಚನ್ ವಿರುದ್ಧ ಸಿಎಐಟಿ ದೂರು

                 ಬೆಂಗಳೂರು: ಫ್ಲಿಪ್‌ಕಾರ್ಟ್‌ 'ಬಿಗ್ ಬಿಲಿಯನ್ ಡೇಸ್ ಸೇಲ್‌' ಮಾರಾಟ ಅಭಿಯಾನದ ಜಾಹೀರಾತಿನಲ್ಲಿ ನಟ ಅಮಿತಾಬ್ ಬಚ್ಚನ್ ಅವರು ಗ್ರಾಹಕರನ್ನು ತಪ್ಪು ದಾರಿಗೆ ಎಳೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

              ಈ ಕುರಿತು ಗ್ರಾಹಕ ನ್ಯಾಯಾಲಯಕ್ಕೆ (CCPA) ವ್ಯಾಪಾರಸ್ಥರ ಸಂಘಟನೆ ಸಿಎಐಟಿ ದೂರು ನೀಡಿದೆ.

              'ಇಂತಹ ಆಫರ್ ನಿಮಗೆ ರಿಟೇಲ್ ಮಳಿಗೆಯಲ್ಲಿ ಸಿಗುವುದಿಲ್ಲ, ತ್ವರೆ ಮಾಡಿ' ಎಂದು ಜಾಹೀರಾತಿನಲ್ಲಿ ಅಮಿತಾಬ್ ಹೇಳಿದ್ದಾರೆ. ಆದರೆ ಇದು ಸುಳ್ಳು, ಇದರಿಂದ ಸಣ್ಣ ವ್ಯಾಪಾರಸ್ಥರಿಗೆ ದೊಡ್ಡ ಹೊಡೆತ ಬೀಳುತ್ತದೆ. ಈ ಜಾಹೀರಾತು ಗ್ರಾಹಕರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಸಿಎಐಟಿ ದೂರಿದೆ.

                  ಫ್ಲಿಪ್‌ಕಾರ್ಟ್‌ ಕಂಪನಿ ಮೇಲೂ ದೊಡ್ಡ ಮೊತ್ತದ ದಂಡ ವಿಧಿಸಬೇಕು, ಅಮಿತಾಬ್ ಅವರಿಗೆ ಕನಿಷ್ಠ ₹10 ಲಕ್ಷ ದಂಡ ವಿಧಿಸಬೇಕು ಎಂದು ದೂರಿನಲ್ಲಿ ಸಿಎಐಟಿ ಮನವಿ ಮಾಡಿದೆ. ಆದರೆ, ಈ ದೂರಿಗೆ ಅಮಿತಾಬ್ ವಕ್ತಾರರು ಹಾಗೂ ಫ್ಲಿಪ್‌ಕಾರ್ಟ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಫ್ಲಿಪ್‌ಕಾರ್ಟ್‌ ನಲ್ಲಿ ಅಕ್ಟೋಬರ್ 8 ರಿಂದ ಅಕ್ಟೋಬರ್ 15ರವರೆಗೆ ಬಿಗ್ ಬಿಲಿಯನ್ ಡೇಸ್‌ ಸೇಲ್ ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries