HEALTH TIPS

ದೆಹಲಿ-ಕಾಮಾಕ್ಯ ನಾರ್ತ್‌ ಈಸ್ಟ್‌ ಎಕ್ಸ್‌ಪ್ರೆಸ್‌: ಹಳಿತಪ್ಪಿದ ಆರು ಬೋಗಿ- 4 ಸಾವು

                 ಕ್ಸರ್: ದೆಹಲಿ-ಕಾಮಾಕ್ಯ ನಾರ್ತ್‌ ಈಸ್ಟ್‌ ಎಕ್ಸ್‌ಪ್ರೆಸ್‌ನ ಆರು ಬೋಗಿಗಳು, ಬಕ್ಸರ್ ಜಿಲ್ಲೆಯ ರಘುನಾಥಪುರ ರೈಲು ನಿಲ್ದಾಣ ಬಳಿ ಬುಧವಾರ ಹಳಿ ತಪ್ಪಿದ್ದು, ಅವಘಡದಲ್ಲಿ ಆರು ಜನರು ಮೃತಪಟ್ಟಿದ್ಧಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

                  ರಾತ್ರಿ 9.35ರ ವೇಳೆಗೆ ಘಟನೆ ಸಂಭವಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

                 ಸ್ಥಳಕ್ಕೆ ಆಂಬುಲೆನ್ಸ್‌ ಧಾವಿಸಿದ್ದು, ಪರಿಹಾರ ಕಾರ್ಯ ನಡೆದಿದೆ. ಸ್ಥಳದಿಂದ ಪ್ರಯಾಣಿಕರನ್ನು ಕರೆದೊಯ್ಯುವ ಸಲುವಾಗಿ ಪಟ್ನಾದಿಂದ 'ಸ್ಕ್ರ್ಯಾಚ್‌ ರೇಕ್' ತರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

          

               2 ರೈಲುಗಳ ಸಂಚಾರ ರದ್ದು, 21 ರೈಲುಗಳ ಮಾರ್ಗ ಬದಲಾವಣೆ

                ಕಾಶಿ ಪಾಟ್ನ ಜನ ಶತಾಬ್ದಿ ಎಕ್ಸ್‌ಪ್ರೆಸ್‌ (15125) ಮತ್ತು ಪಾಟ್ನ ಕಾಶಿ ಜನ ಶತಾಬ್ದಿ ಎಕ್ಸ್‌ಪ್ರೆಸ್‌ (15126) ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಈಸ್ಟ್ ಸೆಂಟ್ರಲ್‌ ರೈಲ್ವೆ ವಲಯದ ಹೇಳಿಕೆ ತಿಳಿಸಿದೆ.

                 ಪುಣೆ-ದಾನಪುರ್‌ ಎಸ್‌ಎಫ್‌ ಎಕ್ಸ್‌ಪ್ರೆಸ್‌, ಪಟ್ಲಿಪುತ್ರ ಎಸ್‌ಎಫ್‌ ಎಕ್ಸ್‌ಪ್ರೆಸ್‌, ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್‌, ವಿಕ್ರಮಶಿಲಾ ಎಕ್ಸ್‌ಪ್ರೆಸ್‌, ರಾಜೇಂದ್ರ ನಗರ ಟರ್ಮಿನಲ್‌ ತೇಜಸ್‌ ರಾಜಧಾನಿ ಎಕ್ಸ್‌ಪ್ರೆಸ್‌ ಸೇರಿದಂತೆ ಒಟ್ಟು 21 ರೈಲುಗಳನ್ನು ಪರ್ಯಾಯ ಮಾರ್ಗಗಳಿಗೆ ಬದಲಾಯಿಸಲಾಗಿದೆ.

ದೆಹಲಿ-ಕಾಮಾಕ್ಯ ನಾರ್ತ್‌ ಈಸ್ಟ್‌ ಎಕ್ಸ್‌ಪ್ರೆಸ್‌ 23 ಬೋಗಿಗಳನ್ನು ಹೊಂದಿದ್ದು, ಬುಧವಾರ ಬೆಳಿಗ್ಗೆ ಸುಮಾರು 7.40 ಗಂಟೆಗೆ ದೆಹಲಿಯ ಆನಂದ್‌ ವಿಹಾರ್‌ ಟರ್ಮಿನಲ್‌ನಿಂದ ಕಾಮಾಕ್ಯಕ್ಕೆ ಹೊರಟಿತ್ತು.

ಘಟನೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ 'ಬಕ್ಸರ್‌ನ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಜಿಲ್ಲಾಡಳಿತ, ರೈಲ್ವೆ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಶೀಘ್ರದಲ್ಲೆ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳ್ಳಲಿದ್ದು, ನಂತರ ಹಳಿಗಳ ಮರುಸ್ಥಾಪನೆ ಕಾರ್ಯ ನಡೆಯಲಿದೆ' ಎಂದು ತಿಳಿಸಿದ್ದಾರೆ.

             'ಜನರಿಗೆ ತ್ವರಿತ ಪರಿಹಾರವನ್ನು ಒದಗಿಸಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಪತ್ತು ನಿರ್ವಹಣೆ ಮತ್ತು ಆರೋಗ್ಯ ಇಲಾಖೆಗಳಿಗೆ ತಿಳಿಸಲಾಗಿದೆ. ಬಕ್ಸರ್‌ ಮತ್ತು ಭೋಜಪುರದ ಜಿಲ್ಲಾಧಿಕಾರಿಗಳ ಬಳಿಯೂ ಮಾತನಾಡಿದ್ದೇನೆ ಮತ್ತು ಶೀಘ್ರದಲ್ಲೆ ಸ್ಥಳಕ್ಕೆ ತಲುಪಲು, ಪರಿಹಾರ ಕಾರ್ಯವನ್ನು ವೇಗಗೊಳಿಸಲು ಸೂಚನೆಗಳನ್ನು ನೀಡಿದ್ದೇನೆ' ಎಂದು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಹೇಳಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries