ತಿರುವನಂತಪುರಂ: ಮದ್ಯ ಹಾಗೂ ಜ್ಯೂಸಿಗೆ ವಿಷ ಬೆರೆಸಿ ಪ್ರಿಯಕರನನ್ನು ಕೊಂದ ಗ್ರೀಷ್ಮಾಗೆ ಜಾಮೀನು ಮಂಜೂರು ಮಾಡಿರುವುದನ್ನು ವಿರೋಧಿಸಿ ಅಖಿಲ ಕೇರಳ ಪುರುಷರ ಸಂಘ ಪ್ರತಿಭಟನೆ ನಡೆಸಿದೆ.
ಪುರುಷ ಸಂಘವು ರಾಜ್ಯ ಸೆಕ್ರಟರಿಯೇಟ್ ಭವನದ ಎದುರು ಗ್ರೀಷ್ಮಾಳ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿತು. ‘ನಾನು ಈ ಭೂಮಿಯಲ್ಲಿ ಬದುಕಲು ಅರ್ಹನಲ್ಲ, ನಾನೇ ಕμÁಯ ಗ್ರೀಷ್ಮ’ ಎಂಬ ಬರಹ ಹಾಗೂ ಗ್ರೀಷ್ಮಾಳ ಭಾವಚಿತ್ರವಿರುವ ಫಲಕಗಳನ್ನು ಹಿಡಿದು ಪ್ರತಿಭಟನಾಕಾರರು ಜಮಾಯಿಸಿದ್ದರು.
ಪ್ರೇಮಿಯಾಗಿದ್ದ ಪಾರಶಾಲ ಜೆ.ಪಿ.ಭವನದ ಜಯರಾಜ್ ಎಂಬವರ ಪುತ್ರ ಶೆರೋನ್ ಎಂಬಾತನನ್ನು ಕಷಾಯ(ಮದ್ಯ)ದಲ್ಲಿ ವಿಷ ಬೆರೆಸಿ ಗ್ರೀಷ್ಮಾ ಹತ್ಯೆಗೈದಿದ್ದಳು. ಪ್ರಕರಣದಲ್ಲಿ ಗ್ರೀಷ್ಮಾ ಮೊದಲ ಆರೋಪಿಯೂ ಹೌದು. ನೆಯ್ಯೂರಿನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ರೇಡಿಯಾಲಜಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಶರೋನ್ ರಾಜ್ ಬಸ್ ಪ್ರಯಾಣದ ವೇಳೆ ಗ್ರೀಷ್ಮಾಳÀನ್ನು ಭೇಟಿಯಾಗಿದ್ದ. ನಂತರ ಪರಿಚಯ ಪ್ರೀತಿಗೆ ತಿರುಗಿತ್ತು. ಅಂತಿಮವಾಗಿ, ಗ್ರೀಷ್ಮಾ ಮತ್ತು ಆಕೆಯ ಸಂಬಂಧಿಕರು ಶರೋನ್‍ನನ್ನು ತೊಡೆದುಹಾಕಲು ಯೋಜಿಸಿದರು. ಈ ಘಟನೆ ಅಕ್ಟೋಬರ್ 2022 ರಲ್ಲಿ ನಡೆಯಿತು. ಶರೋನ್‍ನನ್ನು ಮನೆಗೆ ಕರೆಸಿ ವಿಷ ಬೆರೆಸಿದ ಮದ್ಯ ಹಾಗೂ ಜ್ಯೂಸ್ ಕುಡಿಸಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶರೋನ್ ಅಕ್ಟೋಬರ್ 25 ರಂದು ಮೃತನಾದ.
ಕಳೆದ ವಾರ ಜಾಮೀನು ಪಡೆದು ಗ್ರೀಷ್ಮಾ ಜೈಲಿನಿಂದ ಬಿಡುಗಡೆಯಾಗಿದ್ದಳು. ಸಹ ಕೈದಿಗಳ ದೂರಿನ ಮೇರೆಗೆ ಗ್ರೀಷ್ಮಾಳನ್ನು ಅಟ್ಟಕುಳಂಗರ ಮಹಿಳಾ ಕಾರಾಗೃಹದಿಂದ ಮಾವೇಲಿಕರ ವಿಶೇಷ ಕಾರಾಗೃಹಕ್ಕೆ ವರ್ಗಾಯಿಸಿರುವುದು ಸುದ್ದಿಯಾಗಿತ್ತು.





