ಪಾಲಕ್ಕಾಡ್: ರೈಲಿನಲ್ಲಿ ಆಟಿಕೆ ಗನ್ ತೋರಿಸಿ ಪ್ರಯಾಣಿಕರಿಗೆ ಬೆದರಿಕೆ ಹಾಕಿದ್ದ ನಾಲ್ವರು ಯುವಕರನ್ನು ಬಂಧಿಸಲಾಗಿದೆ. ಮಲಪ್ಪುರಂ ಮೂಲದ ಅಮೀನ್ ಶರೀಫಾ (19), ಕಣ್ಣೂರಿನ ಅಬ್ದುಲ್ ರಫೀಕ್ (24), ಪಾಲಕ್ಕಾಡ್‍ನ ಜೆಬಲ್‍ಶಾ (18) ಮತ್ತು ಕಾಸರಗೋಡಿನ ಮುಹಮ್ಮದ್ ಜಿನ್ನಾನ್ (20) ಎಂಬವರನನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಅವರು ಪಾಲಕ್ಕಾಡ್-ತಿರುಚೆಂದೂರ್ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.
ಯುವಕರು ರೈಲು ಹತ್ತಿ ಇತರ ಪ್ರಯಾಣಿಕರನ್ನು ಬೆದರಿಸಲು ಆಟಿಕೆ ಬಂದೂಕುಗಳನ್ನು ಬಳಸುತ್ತಿದ್ದರು. ಯುವಕರು ಬಂದೂಕು ತುಂಬಿದಂತೆ ನಟಿಸಿ ರೈಲಿನಲ್ಲಿದ್ದ ಜನರ ಮೇಲೆ ಗುಂಡು ಹಾರಿಸುವುದಾಗಿ ಹೇಳಿರುವುದು ಆತಂಕಕ್ಕೆ ಕಾರಣವಾಯಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಆಗ ಪ್ರಯಾಣಿಕರೊಬ್ಬರು ರೈಲ್ವೆ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದರು. ರೈಲು ಕೊಡೈಕೆನಾಲ್ ರಸ್ತೆ ರೈಲು ನಿಲ್ದಾಣವನ್ನು ತಲುಪಿದಾಗ, ಸುಮಾರು 20 ಪೋಲೀಸರು ಪ್ಲಾಟ್‍ಫಾರ್ಮ್ ಅನ್ನು ಸುತ್ತುವರೆದು ಯುವಕರನ್ನು ವಶಕ್ಕೆ ತೆಗೆದುಕೊಂಡರು. ಮಧುರೈನಿಂದ ರಾಮನಾಥಪುರಕ್ಕೆ ತೆರಳಲು ಯುವಕರು ಯೋಜಿಸಿದ್ದರು ಎಂದು ಪೋಲೀಸರು ಮಾಹಿತಿ ನೀಡಿದ್ದು, ಘಟನೆಯಲ್ಲಿ ನಾಲ್ವರನ್ನು ವಿಚಾರಣೆ ನಡೆಸುತ್ತಿದ್ದಾರೆ.




.webp)
