ಕೊಚ್ಚಿ: ಮೆರವಣಿಗೆಗಳು ಮತ್ತು ಪ್ರತಿಭಟನೆÀಗಳಿಗೆ ಪೋಲೀಸ್ ಶುಲ್ಕ ವಿಧಿಸಿದಾಗ, ಅರ್ಜಿದಾರರಿಗೆ ಒದಗಿಸುವ ಸೇವೆಯ ಬಗ್ಗೆ ತಿಳಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಪ್ರತಿಭಟನೆಗಳು ಮತ್ತು ಮೆರವಣಿಗೆಗಳಿಗೆ ಶುಲ್ಕ ವಿಧಿಸುವ ಸರ್ಕಾರದ ಆದೇಶದ ವಿರುದ್ಧ ಅಖಿಲ ಭಾರತ ನಾಗರಿಕ ಹಕ್ಕುಗಳ ರಕ್ಷಣೆಗಾಗಿ ಸಲ್ಲಿಸಿದ ಅರ್ಜಿಯ ಮೇಲೆ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ಮಧ್ಯಂತರ ಆದೇಶವನ್ನು ನೀಡಿದರು.
ಸೇವೆಯನ್ನು ಒದಗಿಸಿದಾಗ ಶುಲ್ಕವನ್ನು ಸಾಮಾನ್ಯವಾಗಿ ವಿಧಿಸಲಾಗುತ್ತದೆ. ಸೆಪ್ಟೆಂಬರ್ 10ರ ಆದೇಶದಲ್ಲಿ ಯಾವ ಸೇವೆಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಿಲ್ಲ ಎಂದು ಹೈಕೋರ್ಟ್ ಸೂಚಿಸಿದೆ.
ಈ ಕುರಿತು ವಿವರಣೆ ನೀಡಲು ಇನ್ನಷ್ಟು ಕಾಲಾವಕಾಶ ನೀಡುವಂತೆ ಸರ್ಕಾರಿ ವಕೀಲರು ಮನವಿ ಮಾಡಿದ ಹಿನ್ನೆಲೆಯಲ್ಲಿ ಅರ್ಜಿಯನ್ನು ಮುಂದಿನ ವಿಚಾರಣೆಗೆ ಮುಂದೂಡಲಾಯಿತು. ಅಲ್ಲಿಯವರೆಗೆ, ಅಂತಹ ಶುಲ್ಕವನ್ನು ಪರಿಚಯಿಸಿದಾಗ ಯಾವ ಸೇವೆಗಳನ್ನು ಒದಗಿಸಲಾಗುತ್ತದೆ ಎಂಬುದನ್ನು ಪೋಲೀಸರು ವಿವರಿಸಬೇಕು ಎಂದು ಸೂಚಿಸಲಾಗಿದೆ.




.webp)
