ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಪಡನ್ನದಲ್ಲಿ ಮದ್ರಸಾ ವಿದ್ಯಾರ್ಥಿಯೊಬ್ಬನಿಗೆ ಸಲಿಂಗ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆ ಮದ್ರಸಾ ಶಿಕ್ಷಕನನ್ನು ಪೊಲೀಸರು ಪೋಕ್ಸೋ ಅನ್ವಯ ಬಂಧಿಸಿದ್ದಾರೆ.
ಪೆರಿಯ ಕುಣಿಯ ನಿವಾಸಿ ಎನ್.ಎ ಮಹಮ್ಮದ್ ಶಾಹಿದ್(27)ಬಂಧಿತ. ಹಬ್ಬದ ಸಂದರ್ಭ ಜಕಾತ್ ಪಡೆಯಲು ಆಗಮಿಸಿದ್ದ ಬಾಲಕನ್ನು ಪಡನ್ನದಲ್ಲಿರುವ ಕೊಠಡಿಯೊಳಗೆ ಕರೆದೊಯ್ದು ಮೊದಲು ಕಿರುಕುಳ ನೀಡಿದ್ದರೆ, ನಂತರ ಕಾಸರಗೋಡಿನ ರೈಲ್ವೆ ನಿಲ್ದಾಣ ಸನಿಹದ ಕೊಠಡಿಗೆ ಕರೆದೊಯ್ದು ಕಿರುಕುಳ ನೀಡಿರುವುದಾಗಿ ಬಾಲಕ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

