HEALTH TIPS

ಬಹುಜನ ವೇದಿಕೆ-ಅಕ್ಟೋಬರ್ 7ರಂದು ಸಂಘಟನಾ ಸಮಿತಿ ರಚನಾ ಸಭೆ

             

                  ಕಾಸರಗೋಡು: ನವಕೇರಳ ನಿರ್ಮಾಣದ ಅಂಗವಾಗಿ ಸರ್ಕಾರ ಸಾಧಿಸಿರುವ ಪ್ರಗತಿ ಮತ್ತು ಕೈಗೊಳ್ಳಲಿರುವ ಯೋಜನೆಗಳ ಕುರಿತು ಜನರೊಂದಿಗೆ ಸಂವಾದ ನಡೆಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನೇತೃತ್ವದಲ್ಲಿ ಸಚಿವರು ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡಿ  ಆಯಾ ಕ್ಷೇತ್ರಗಳಲ್ಲಿ ಬಹುಜನ ವೇದಿಕೆಯನ್ನು ಆಯೋಜಿಸಲಾಗುವುದು. ಈ ಸಂದರ್ಭ ಎಲ್ಲಾ ಗಣ್ಯ ವ್ಯಕ್ತಿಗಳೊಂದಿಗೆ ಜಿಲ್ಲಾ ಮಟ್ಟದ ಸಭೆಯನ್ನೂ ಆಯೋಜಿಸಲಾಗುವುದು. ಕ್ಷೇತ್ರ ಕೇಂದ್ರೀಕರಿಸಿ ನ. 19ರಂದು ಕಾಂಞಂಗಾಡ್ ಕ್ಷೇತ್ರದ ನವಕೇರಳ ವೇದಿಕೆ ನಡೆಯಲಿದೆ.  ಕಾರ್ಯಕ್ರಮದ ಯಶಸ್ವಿಗಾಗಿ ನವಕೇರಳ ವೇದಿಕೆಯ ಸಂಘಟನಾ ಸಮಿತಿ ರಚನಾ ಸಭೆ ಅಕ್ಟೋಬರ್ 7 ರಂದು ಸಂಜೆ 4ಕ್ಕೆ ಕಾಂಞಂಗಾಡ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಸಭಾಂಗಣದಲ್ಲಿ ಜರುಗಲಿದೆ. ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries