HEALTH TIPS

ಮೀನು ಫ್ರೆಶ್ ಇದೆಯೇ? ಇಲ್ಲವೇ ಎಂದು ತಿಳಿಯಲು ಈ ಸಿಂಪಲ್ ಟೆಸ್ಟ್ ಮಾಡಿ

 ಮೀನು ಪ್ರಿಯರಿಗೆ ಮೀನು ಕೊಳ್ಳುವಾಗ ಎದುರಾಗುವ ದೊಡ್ಡ ಸಮಸ್ಯೆಯೆಂದರೆ ಆ ಮೀನು ಫ್ರೆಶ್ ಆಗಿದೆಯೇ ಎಂದು ತಿಳಿಯದೆ ಇರುವುದು.... ಕೆಲವೊಮದು ಮೀನು ಕೊಳ್ಳುವಾಗ ಫ್ರೆಷ್‌ ಅಂತ ಅನಿಸುವುದು, ಆದರೆ ಮನೆಗೆ ತಂದ ಮೇಲೆ ಅದು ಫ್ರೆಶ್‌ ಅಲ್ಲ ಎಂದು ತಿಳಿಯುವುದು. ಮೀನು ತುಂಬಾ ಸಮಯ ಬಾಳಿಕೆ ಬರಲು ಅಥವಾ ಫ್ರೆಶ್ ಆಗಿ ಕಾಣುವಂತೆ ಮಾಡಿ ಗ್ರಾಹಕನನ್ನು ಮೋಸ ಮಾಡಲು ಮೀನಿಗೆ ರಾಸಾಯನಿಕ ಹಾಕುವವರೆಗೆ ಏನೂ ಕಡಿಮೆಯಿಲ್ಲ. ಮೀನು ಆರೋಗ್ಯಕ್ಕೆ ಒಳ್ಳೆಯದು,ಅದೇ ಕೆಮಿಕಲ್ ಹಾಕಿರುವ ಮೀನು ತಿಂದರೆ ಕ್ಯಾನ್ಸರ್‌ನಂಥ ಮಾರಕ ರೋಗ ಬರುವುದು. ಆದ್ದರಿಂದ ನಾವು ತಿನ್ನುವ ಆಹಾರದ ಕಡೆಗೆ ತುಂಬಾನೇ ಗಮನಹರಿಸಬೇಕು.

ನೀವು ಮೀನು ಮಾರುಕಟ್ಟೆಗೆ ಹೋದಾಗ ಕೆಲವೊಂದು ಅಂಶ ಗಮನಿಸಿದರೆ ಸಾಕು ನಿಮಗೆ ನೀವು ಖರೀದಿಸುವ ಮೀನು ಫ್ರೆಶ್ ಆಗಿದೆಯೇ, ಇಲ್ಲವೇ ಎಂದು ತಿಳಿಯುತ್ತದೆ. ಆ ಟಿಪ್ಸ್ ಏನು ಎಂದು ನೋಡೋಣ ಬನ್ನಿ:

ಮೀನನ್ನು ಮುಟ್ಟಿ ನೋಡಿ:
ನೀವು ಮೀನನ್ನು ಮುಟ್ಟಿ ನೋಡಬೇಕು, ಅಂದರೆ ಅದನ್ನು ನಿಮ್ಮ ಬೆರಳಿನಿಂದ ಒತ್ತಿ, ನೀವು ಒತ್ತಿದ ಭಾಗ ಗುಂಡಿ ರೀತಿಯಾಗಿ ಮತ್ತೆ ಸರಿಯಾದರೆ ಆ ಮೀನು ತುಂಬಾ ಹಳೆಯದಲ್ಲ ಎಂದು ಹೇಳಬಹುದು, ಇಲ್ಲಾ ನೀವು ಒತ್ತಿದ ಭಾಗದಲ್ಲಿ ಗುಂಡಿ ಹಾಗೆಯೇ ಇದ್ದರೆ ಅದು ಫ್ರೆಶ್ ಅಲ್ಲ ಎಂದರ್ಥ. ಇಲ್ಲಿಯೂ ಮೋಸ ಹೋಗುವ ಚಾನ್ಸ್ ಇದೆ, ಏಕೆಂದರೆ ಕೆಲ ಕೆಮಿಕಲ್ ಹಾಕಿ ನೋಡಲು ತಾಜಾವಾಗಿ ಕಾಣುವಂತೆ ಇಟ್ಟಿರಬಹುದು.

ಮೀನನ್ನು ಮೂಸಿ ನೋಡಿ
ಮೀನು ಫ್ರೆಶ್‌ ಇದ್ದಾಗ ಅದಕ್ಕೆ ವಾಸನೆ ಇರಲ್ಲ ಅಂದಲ್ಲ, ತಾಜಾ ಮೀನಿನ ವಾಸನೆ ನಿಮಗೆ ಅಷ್ಟೊಂದು ದುರ್ವಾಸನೆ ಬೀರುವುದಿಲ್ಲ, ಅದೇ ಮೀನು ಹಿಡಿದು ತುಂಬಾ ಸಮಯ ಆಗಿದ್ದರೆ ಅದರ ಒಳಭಾಗ ಕೊಳೆಯಲಾರಂಭಿಸಿ ತುಂಬಾನೇ ದುರ್ವಾಸನೆ ಬೀರುವುದು.

ಮೀನು ಫ್ರೆಶ್‌ ಇದ್ದಾಗ ಅದಕ್ಕೆ ವಾಸನೆ ಇರಲ್ಲ ಅಂದಲ್ಲ, ತಾಜಾ ಮೀನಿನ ವಾಸನೆ ನಿಮಗೆ ಅಷ್ಟೊಂದು ದುರ್ವಾಸನೆ ಬೀರುವುದಿಲ್ಲ, ಅದೇ ಮೀನು ಹಿಡಿದು ತುಂಬಾ ಸಮಯ ಆಗಿದ್ದರೆ ಅದರ ಒಳಭಾಗ ಕೊಳೆಯಲಾರಂಭಿಸಿ ತುಂಬಾನೇ ದುರ್ವಾಸನೆ ಬೀರುವುದು.

ಮೀನಿನ ಕಣ್ಣು ನೋಡಿ ತಿಳಿಯಬಹುದು
ಮೀನಿನ ಕಣ್ಣು ನೋಡಿ ಆ ಮೀನು ಫ್ರೆಶ್ ಆಗಿ ಇದೆಯೇ, ಇಲ್ಲವೇ ಎಂದು ತಿಳಿಯಬಹುದು. ಮೀನು ತಾಜಾವಾಗಿಲ್ಲ ಎಂದಾದರೆ ಅದರ ಕಣ್ಣು ಕ್ಲಿಯರ್‌ ಆಗಿ ಇರಲ್ಲ, ತಾಜಾ ಮೀನು ಆಗಿದ್ದರೆ ಕಣ್ಣು ತುಂಬಾ ಕ್ಲಿಯರ್ ಆಗಿರುತ್ತದೆ. ಮೀನಿನ ಕಣ್ಣು ಕೆಂಪು ಬಣ್ಣಕ್ಕೆ ತಿರುಗಿದರೆ ಆ ಮೀನು ಹಿಡಿದು ತುಂಬಾ ದಿನವಾಗಿದೆ ಎಂದು ಊಹಿಸಬಹುದು.

ಅದರ ಕಿವಿರು ಪರೀಕ್ಷಿಸಿ: ಅದರ ಗಿಲ್ಸ್ ಅಥವಾ ಕಿವಿರು ಇದೆಯೆಲ್ಲಾ ಆ ಭಾಗ ಪರೀಕ್ಷೆ ಮಾಡಿ, ಅದು ಕೆಂಪಾಗಿದ್ದರೆ ಫ್ರೆಶ್ ಕಂದು ಅಥವಾ ಹಳದಿ ಬಣ್ಣಕ್ಕೆ ತಿರುಗಿದ್ದರೆ ಅದು ಹಳೆಯ ಮೀನಿನ ಲಕ್ಷಣವಾಗಿದೆ.

ಇತರ ಲಕ್ಷಣಗಳು: ಮೀನಿನ ತ್ವಚೆಯಲ್ಲಿ ಬದಲಾವಣೆ ಅಥವಾ ಅದರ ತುದಿ ಹಳದಿ ಬಣ್ಣಕ್ಕೆ ತಿರುಗುವುದು, ಮುಟ್ಟಿದಾಗ ತುಂಬಾ ಮೆತ್ತಗೆ ಇದ್ದರೆ ಅದು ತಾಜಾ ಮೀನು ಅಲ್ಲ ಎಂದರ್ಥ.

ಏನಾದರೂ ಫಂಕ್ಷನ್‌ಗೆ ನೀವು ತುಂಬಾ ಮೀನು ಖರೀದಿಸುವಾಗ ಏನು ಮಾಡಬೇಕು?
rapid detection kit ಅಂತ ಸಿಗುವುದು, ಇದನ್ನು ಬಳಸಿ ನೀವು ಖರೀದಿಸುವ ಮೀನು ತಾಜಾವಾಗಿದೆಯೇ, ಇಲ್ಲವೇ ಎಂದು ತಿಳಿಯಬಹುದು. ಇದನ್ನು ಬಳಸಿ ಮೀನಿಗೆ ಅಮೋನಿಯಾ , ಫಾರ್ಮಾಲೀಹೈಡ್ ಬಳಸಿದ್ದಾರೆಯೇ ಎಂದು ತಿಳಿಯಬಹುದು. ನೀವು ಸ್ಟ್ರಿಪ್ ತೆಗೆದು ಅದರ ಕಿವಿರು ಬಳಿ ಉಜ್ಜಿ ಅವರು ನೀಡಿರುವ ಸಲ್ಯೂಷನ್ ಒಂದು ಹನಿ ಹಾಕಿದರೆ ಅದು ನೀಲಿ ಬಣ್ಣಕ್ಕೆ ತಿರುಗಿದರೆ ಆ ಮೀನಿಗೆ ಕೆಮಿಕಲ್ ಬಳಸಿದ್ದಾರೆ ಎಂದರ್ಥ.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries