ನವದೆಹಲಿ: ಮಾರ್ಕ್ ಜುಕರ್ ಬರ್ಗ್ ನೇತೃತ್ವದ ಫೇಸ್ಬುಕ್, ಇನ್ಸ್ಟಾಗ್ರಾಮ್ನ ಮಾತೃಸಂಸ್ಥೆ ಮೆಟಾ(meta)ವು 2024ರಿಂದ ಯಾಡ್ಸ್ ಫ್ರೀ ಸಬ್ ಸ್ಕ್ರಿಪ್ಷನ್ ಯೋಜನೆಯನ್ನು ಅನುಷ್ಠಾನಗೊಳಿಸಲು ಸಿದ್ಧತೆ ನಡೆಸುತ್ತಿದೆ.
0
samarasasudhi
ಅಕ್ಟೋಬರ್ 10, 2023
ನವದೆಹಲಿ: ಮಾರ್ಕ್ ಜುಕರ್ ಬರ್ಗ್ ನೇತೃತ್ವದ ಫೇಸ್ಬುಕ್, ಇನ್ಸ್ಟಾಗ್ರಾಮ್ನ ಮಾತೃಸಂಸ್ಥೆ ಮೆಟಾ(meta)ವು 2024ರಿಂದ ಯಾಡ್ಸ್ ಫ್ರೀ ಸಬ್ ಸ್ಕ್ರಿಪ್ಷನ್ ಯೋಜನೆಯನ್ನು ಅನುಷ್ಠಾನಗೊಳಿಸಲು ಸಿದ್ಧತೆ ನಡೆಸುತ್ತಿದೆ.
ಚಿನ್ನ, ಬೆಳ್ಳಿ ಬೆಲೆ ಏರಿಕೆ: ಮತ್ತಷ್ಟು ದುಬಾರಿಯಾಗಲಿದೆ ಚಿನ್ನಾಭರಣ
ಯುರೋಪಿಯನ್ ಯೂನಿಯನ್‌ನಲ್ಲಿ ಜಾಹೀರಾತು ಮುಕ್ತ ಚಂದಾದಾರಿಕೆ ಯೋಜನೆಗಳ ಅನುಷ್ಠಾನದ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆಯೇ ಮೆಟಾ ಪ್ಲಾಟ್‌ಫಾರ್ಮ್‌ಗಳು 2024 ರ ವೇಳೆಗೆ ಭಾರತೀಯ ಮಾರುಕಟ್ಟೆಗೆ ಇದೇ ರೀತಿಯ ಯೋಜನೆಗಳನ್ನು ಪರಿಚಯಿಸಲು ಆಲೋಚಿಸುತ್ತಿದೆ ಎಂದು ವರದಿಯಾಗಿದೆ.
ಫೇಸ್ ಬುಕ್, ಇನ್ಸ್ಟಾಗ್ರಾಮ್ ಅನ್ನು ಜಾಹೀರಾತುಗಳಿಲ್ಲದೆ ಬಳಕೆ ಮಾಡುವುದು ಎಂದರೆ ಖಚಿತವಾಗಿ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಜಾಹೀರಾತು ನೋಡಿಯೇ ಇವುಗಳನ್ನು ಬಳಸುತ್ತೇವೆ ಎನ್ನುವವರು ಮಾತ್ರ ಶುಲ್ಕ ಪಾವತಿಸುವ ಅಗತ್ಯತೆ ಇರುವುದಿಲ್ಲ ಎನ್ನಲಾಗುತ್ತಿದೆ.
ಕೇವಲ ಭಾರತದಲ್ಲಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಈ ವಿಧಾನ ಅನುಷ್ಠಾನಕ್ಕೆ ಸಂಸ್ಥೆ ಯೋಚಿಸುತ್ತಿದೆ. ಟ್ರಯಲ್ ನಂತರ 2024ರ ಮಧ್ಯಭಾಗದಲ್ಲಿ ಅಥವಾ ವರ್ಷಾಂತ್ಯಕ್ಕೆ ಜಾಹೀರಾತು ರಹಿತ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಮೆಟಾ ಆಡಳಿತ ಯೋಚಿಸುತ್ತಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಬಳಕೆದಾರರ ಅನುಮತಿಯಿಲ್ಲದೆ ಪ್ರಕಟಣೆ ಹೊರಡಿಸಿದ್ದಕ್ಕೆ ಐರ್ಲೆಂಡ್ ಪ್ರೈವೇಸಿ ಕಮಿಷನ್ ಮೆಟಾಗೆ ಭಾರೀ ದಂಡ ವಿಧಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜಾಹೀರಾತು ರಹಿತ ಬಳಕೆ ವಿಧಾನವನ್ನು ತರಲು ಉದ್ದೇಶಿಸುತ್ತಿದೆ ಎನ್ನಲಾಗುತ್ತಿದೆ.