ಬದಿಯಡ್ಕ: ಗಾಂಧಿಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯದ ಅಂಗವಾಗಿ ರೋಟರಿ ಕ್ಲಬ್ ಬದಿಯಡ್ಕದ ನೇತೃತ್ವದಲ್ಲಿ ಬದಿಯಡ್ಕ 14 ನೇ ವಾರ್ಡಿನ ಬೋಳುಕಟ್ಟೆಯಲ್ಲಿರುವ ಅಂಗನವಾಡಿ ಕೇಂದ್ರದ ಪರಿಸರ ಶುಚೀಕರಣ ಕಾರ್ಯವು ಸೋಮವಾರ ನಡೆಯಿತು.
ರೋಟರಿ ಕ್ಲಬ್‍ನ ಅಧ್ಯಕ್ಷ , ಬಿ ರಾಧಾಕೃಷ್ಣ ಪೈ, ಕೋಶಾಧಿಕಾರಿ ಕೇಶವ ಬಿ ಹಾಗೂ ರೋಟರಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶುಚೀಕರಣ ಕಾರ್ಯಕ್ಕೆ ತಮ್ಮ ಸಹಕಾರವನ್ನಿತ್ತರು. ಬಳಿಕ ಪುಟಾಣಿ ಮಕ್ಕಳಿಗೆ ಬಿಸ್ಕತ್ತು ವಿತರಿಸಲಾಯಿತು. ಅಂಗನವಾಡಿ ಶಿಕ್ಷಕಿ ಸುಜಾತ ಕೃಷ್ಣ ಹಾಗೂ ಸಹಾಯಕಿ ಬೇಬಿ ಜಿ.ಯವರು ಕೃತಜ್ಞತೆಯನ್ನು ಸಲ್ಲಿಸಿದರು. ರೋಟರಿ ಕಾರ್ಯದರ್ಶಿ ವೈ.ರಾಘವೇಂದ್ರ ಪ್ರಸಾದ್ ನಾಯಕ್ ವಂದಿಸಿದರು.

.jpg)
