ಬದಿಯಡ್ಕ: ಭಾರತದ ಭವ್ಯ ಪರಂಪರೆ, ಸಂಸ್ಕಾರ, ಸಂಸ್ಕೃತಿಗಳನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವುದು ನಮ್ಮೆಲ್ಲರ ಹೊಣೆ. ಊರ ಕ್ಷೇತ್ರಗಳಲ್ಲಿ ಬಾಲ ಗೋಕುಲದಂತಹ ದೇಶಿಯ ಮಕ್ಕಳ ಸಂಘಟನೆಗಳನ್ನು ಬೆಳೆಸಿ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ, ಸನಾತನ ಧರ್ಮದ ಬಗ್ಗೆ ಅರಿವು ಮೂಡಿಸುವುದು ನಮ್ಮಿಂದಾಗಬೇಕು. ನೈತಿಕ ಶಿಕ್ಷಣ, ಧಾರ್ಮಿಕ ಶಿಕ್ಷಣ, ಶಾರೀರಿಕ ಮತ್ತು ಮಾನಸಿಕ ಶಿಕ್ಷಣ ಇವೆಲ್ಲವೂ ಲಭ್ಯವಾಗುವ ಬಾಲಗೋಕುಲಗಳು ಹೆಚ್ಚೆಚ್ಚು ರೂಪಗೊಳ್ಳಬೇಕು. ಗ್ರಾಮ ದೇವಸ್ಥಾನಗಳು ಧರ್ಮದ ರಕ್ಷಣೆಗೂ ಧಾರ್ಮಿಕ ಶಿಕ್ಷಣ ನೀಡುವುದಕ್ಕೂ ಮುಂದಾಗಬೇಕು ಎಂದು ಸಾಮೂಹಿಕ ಸಮರ ಸಭಾ ಜಿಲ್ಲಾ ಪ್ರಮುಖ್ ವಿ.ಕೆ. ಸತೀಶ್ ಮಾಸ್ತರ್ ಅಭಿಪ್ರಾಯಪಟ್ಟರು.
ಬಡಗು ಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ಸನ್ನಿಧಿಯ ವಠಾರದಲ್ಲಿ ಆರಂಭಿಸಲಾದ ಭಾರ್ಗವ ಬಾಲಗೋಕುಲದ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಶಾಲೆಯ ಹೈಯರ್ ಸೆಕೆಂಡರಿ ಅಧ್ಯಾಪಕ ಹರಿನಾರಾಯಣ ಶಿರಂತಡ್ಕ ಉದ್ಘಾಟಿಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಡಾ. ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ದೇವದಾಸ್ ನುಳ್ಳಿಪ್ಪಾಡಿ, ನಾರಾಯಣ ಮಾಸ್ತರ್ ಮನ್ನಿಪ್ಪಾಡಿ, ದಿನೇಶ್ ಮಾಸ್ತರ್ ಬದಿಯಡ್ಕ, ಯೋಗೀಶ್ ಪೊಡಿಪಳ್ಳ, ರಾಜೇಶ್ ಶೆಟ್ಟಿ ಗಾಡಿಗುಡ್ಡೆ, ಪ್ರಶಾಂತ್ ಕುಣಿಕುಳ್ಳಾಯ ಮಂಗಳೂರು, ಹರೀಶ್ ಕುಣಿಕುಳ್ಳಾಯ ನಡುಮನೆ ಭಾಗವಹಿಸಿದ್ದರು. ರಾಜೇಶ್ ಉಬ್ರಂಗಳ ಸ್ವಾಗತಿಸಿ, ರಮ್ಯಾ ಸತೀಶ್ ವಂದಿಸಿದರು. ಬಳಿಕ ದೇವದಾಸ್ ನುಳ್ಳಿಪ್ಪಾಡಿ ಅವರು ತರಗತಿ ನಡೆಸಿಕೊಟ್ಟರು.

.jpg)
