HEALTH TIPS

ಬಿಹಾರ ಸಮೀಕ್ಷೆಯ ವರದಿ ಬಿಡುಗಡೆ: ರಾಷ್ಟ್ರೀಯ ಜಾತಿಗಣತಿಗೆ ಒತ್ತಡ

                 ಟ್ನಾ: ಬಿಹಾರ ಸರ್ಕಾರವು ಜಾತಿ ಗಣತಿಯ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ದೇಶದಾದ್ಯಂತ ಜಾತಿ ಗಣತಿ ನಡೆಸಬೇಕು ಎಂಬ ಕೂಗು ಏಳುವುದಕ್ಕೆ ಇದು ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿದೆ. ಬಿಹಾರದಲ್ಲಿ ಇತರ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಅತ್ಯಂತ ಹಿಂದುಳಿದ ವರ್ಗಗಳಿಗೆ (ಇಬಿಸಿ) ಸೇರಿದ ಜನರ ಪ್ರಮಾಣವು ಶೇ 63.13ರಷ್ಟಿದೆ ಎಂಬ ಅಂಶವು ಜಾತಿ ಗಣತಿ ವರದಿಯಿಂದಾಗಿ ಬಯಲಾಗಿದೆ.

                 ಇಬಿಸಿ ವರ್ಗಗಳ ಜನಸಂಖ್ಯೆಯ ಪ್ರಮಾಣವು ಶೇ 36.01ರಷ್ಟಿದೆ (4.70 ಕೋಟಿ). ಒಬಿಸಿ ಪ್ರಮಾಣವು ಶೇ 27.12ರಷ್ಟಿದೆ (3.54 ಕೋಟಿ).

                 ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಗಾಂಧಿ ಜಯಂತಿಯಂದು ಜಾತಿ ಗಣತಿಯ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ಜಾತಿ ಗಣತಿ ನಡೆಸಲು ಹಲವು ತೊಡಕುಗಳು ಎದುರಾಗಿದ್ದವು. ಈ ಎಲ್ಲ ತೊಡಕುಗಳನ್ನು ನಿವಾರಿಸಿ, ಜಾತಿ ಗಣತಿ ನಡೆಸಿ ವರದಿಯನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ಪ್ರತಿಸ್ಪರ್ಧಿಗಳಿಗೆ ರಾಜಕೀಯ ಸಂದೇಶವೊಂದನ್ನು ನಿತೀಶ್‌ ನೀಡಿದ್ದಾರೆ.

                  ಒಬಿಸಿ ಮತ್ತು ಇತರ ಹಿಂದುಳಿದ ವರ್ಗಗಳ ನಿಖರ ಸಂಖ್ಯೆಯು ಈಗ ಗೊತ್ತಾಗಿರುವುದರಿಂದ ಮೀಸಲಾತಿ ಹೆಚ್ಚಿಸಬೇಕು ಎಂಬ ಬೇಡಿಕೆ ಕೇಳಿಬರಬಹುದು. ಸಮೀಕ್ಷೆಯು ಜಾತಿ ಮತ್ತು ಧರ್ಮವಾರು ಜನಸಂಖ್ಯೆಯ ಮಾಹಿತಿಯನ್ನೂ ನೀಡಿದೆ.

             ಜಾತೀಯತೆಯ ವಿರುದ್ಧ ಹೋರಾಡಿದ ಗಾಂಧೀಜಿ ಅವರ ಜನ್ಮದಿನದಂದೇ ಜಾತಿ ಗಣತಿಯ ವರದಿಯನ್ನು ಪ್ರಕಟಿಸಲಾಗಿದೆ ಎಂದು ನಿತೀಶ್‌ ಹೇಳಿದ್ದಾರೆ. ಜಾತಿ ಗಣತಿಯ ಪ್ರಸ್ತಾವಕ್ಕೆ ಬಿಜೆಪಿ ಸೇರಿ ಎಲ್ಲ ಒಂಬತ್ತು ಪಕ್ಷಗಳು ವಿಧಾನಸಭೆಯಲ್ಲಿ ಒಪ್ಪಿಗೆ ನೀಡಿದ್ದವು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ.

                 ಈ ಗಣತಿಯು ರಾಷ್ಟ್ರ ಮಟ್ಟದಲ್ಲಿ ಜಾತಿ ಗಣತಿ ನಡೆಸಬೇಕು ಎಂಬ ಬೇಡಿಕೆಗೆ ಪುಷ್ಟಿ ನೀಡಲಿದೆ ಎಂದು ನಿತೀಶ್‌ ಅವರ ಜೆಡಿಯುನ ಮಿತ್ರಪಕ್ಷ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಹೇಳಿದ್ದಾರೆ. ಕೇಂದ್ರದಲ್ಲಿ 'ಇಂಡಿಯಾ' ಮೈತ್ರಿಕೂಟವು 2024ರ ಲೋಕಸಭೆ ಚುನಾವಣೆ ಬಳಿಕ ಸರ್ಕಾರ ರಚಿಸಲಿದೆ. ಈ ಸರ್ಕಾರವು ದೇಶದಾದ್ಯಂತ ಜಾತಿ ಗಣತಿ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

ಜಾತಿ ಗಣತಿ ನಡೆಸುವುದಕ್ಕೆ ಪಟ್ನಾ ಹೈಕೋರ್ಟ್‌ ತಡೆ ನೀಡಿತ್ತಾದರೂ ಬಳಿಕ ಅದನ್ನು ತೆರವುಗೊಳಿಸಿತ್ತು. ಈ ಗಣತಿಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು.

                 ಲಾಲು ಪ್ರಸಾದ್‌ ಆರ್‌ಜೆಡಿ ಅಧ್ಯಕ್ಷ ರಾಷ್ಟ್ರವ್ಯಾಪಿ ಜಾತಿಗಣತಿ ನಡೆಸುವ ಅಗತ್ಯವನ್ನು ಬಿಹಾರದಲ್ಲಿ ಜಾತಿಗಣತಿ ಎತ್ತಿತೋರಿಸಿದೆ. ಕೇಂದ್ರದಲ್ಲಿ ನಾವು ಸರ್ಕಾರ ರಚಿಸಿದ ವೇಳೆ ಈ ಕೆಲಸಕ್ಕೆ ಕೈಹಾಕಲಿದ್ದೇವೆಬಿ.ಕೆ. ಹರಿಪ್ರಸಾದ್‌ ಹಿಂದುಳಿದ ವರ್ಗದ ಹಿರಿಯ ನಾಯಕ'ರಾಹುಲ್‌ ಅವರು ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವ ಬಗ್ಗೆ ಮಾತನಾಡಿದ್ದಾರೆ. ಇದರಿಂದಾಗಿ ಕರ್ನಾಟಕ ಸರ್ಕಾರ ತಕ್ಷಣವೇ ಜಾತಿ ಗಣತಿಯನ್ನು ಬಿಡುಗಡೆ ಮಾಡುವುದು ಈಗ ಅನಿವಾರ್ಯ'ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು 2015ರಲ್ಲಿ ಜಾತಿ ಗಣತಿ ನಡೆಸಿತ್ತು. ಆದರೆ ಈ ಗಣತಿಯ ವರದಿ ಇನ್ನೂ ಬಹಿರಂಗ ಆಗಿಲ್ಲ. ಈ ವರದಿಯನ್ನು ಬಿಡುಗಡೆ ಮಾಡಬೇಕು ಎಂಬ ಕೂಗು ಜೋರಾಗಿಯೇ ಕೇಳಿ ಬರುತ್ತಿದೆ. 'ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಪಕ್ಷಗಳು ಬಿಹಾರದಲ್ಲಿ ಆಡಳಿತ ನಡೆಸುತ್ತಿವೆ. ಬಿಹಾರದ ಜಾತಿ ಗಣತಿಯನ್ನು ರಾಹುಲ್‌ ಗಾಂಧಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಕರ್ನಾಟಕ ಸರ್ಕಾರವು ಜಾತಿ ಗಣತಿ ವರದಿಯನ್ನು ಬಹಿರಂಗ ಮಾಡಬೇಕು' ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ. ಹರಿಪ್ರಸಾದ್‌ ಒತ್ತಾಯಿಸಿದ್ದಾರೆ. ಬಿಜೆಪಿ ರಾಜ್ಯ ಘಟಕ ಅಸಮಾಧಾನ ನಿತೀಶ್‌ ಕುಮಾರ್‌ ಸರ್ಕಾರ ಬಿಡುಗಡೆ ಮಾಡಿರುವ ಜಾತಿ ಗಣತಿಗೆ ಬಿಜೆಪಿ ಬಿಹಾರ ಘಟಕ ಅಸಮಾಧಾನ ವ್ಯಕ್ತಪಡಿಸಿದೆ. ಇದು ಹಲವು ವರ್ಷಗಳಲ್ಲಿ 'ಬದಲಾಗಿರುವ ಸಾಮಾಜಿಕ ಮತ್ತು ಆರ್ಥಿಕ ವಾಸ್ತವಾಂಶ'ಗಳ ಬಗ್ಗೆ ಏನನ್ನೂ ತಿಳಿಸುವುದಿಲ್ಲ ಎಂದು ಅಧ್ಯಕ್ಷ ಸಾಮ್ರಾಟ್‌ ಚೌಧರಿ ಹೇಳಿದ್ದಾರೆ. 'ಪಕ್ಷವು ಗಣತಿ ಕಾರ್ಯಕ್ಕೆ ಒಪ್ಪಿಗೆ ನೀಡಿತ್ತು. ಆದರೆ ಈಗ ವರದಿಯನ್ನು ಪರಿಶೀಲಿಸಿದ ನಂತರ ಹೇಳಿಕೆ ನೀಡಲಾಗುವುದು' ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.'ರಾಜ್ಯದ ಜಾತಿ ಗಣತಿ ವರದಿ ಬಿಡುಗಡೆ ಮಾಡಿ'ಜಾತಿ ಗಣತಿಯ ವರದಿ ಬಿಡುಗಡೆ ಮಾಡಿರುವುದನ್ನು 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು ಸ್ವಾಗತಿಸಿವೆ. ದೇಶದಾದ್ಯಂತ ಜಾತಿ ಗಣತಿ ನಡೆಸಲು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಹಿಂದೇಟು ಹಾಕುತ್ತಿದೆ ಎಂದು ಈ ಪಕ್ಷಗಳು ದೂರಿವೆ. ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಇರಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್‌ ಮುಂದಿಟ್ಟಿದೆ. 'ಒಬಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಸಂಖ್ಯೆಯು ಒಟ್ಟು ಜನಸಂಖ್ಯೆಯ ಶೇ 84ರಷ್ಟಿದೆ. ಕೇಂದ್ರ ಸರ್ಕಾರದ 90 ಕಾರ್ಯದರ್ಶಿಗಳ ಪೈಕಿ ಒಬಿಸಿಗೆ ಸೇರಿದವರು ಇರುವುದು ಮೂವರು ಮಾತ್ರ. ಈ ಮೂವರು ದೇಶದ ಬಜೆಟ್‌ನ ಶೇ 5ರಷ್ಟನ್ನು ಮಾತ್ರ ನಿರ್ವಹಿಸುತ್ತಿದ್ದಾರೆ. ಹಾಗಾಗಿಯೇ ಜಾತಿ ಮಾಹಿತಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಜನಸಂಖ್ಯೆ ಹೆಚ್ಚಿದಂತೆ ಹಕ್ಕುಗಳು ಹೆಚ್ಚಾಗುತ್ತವೆ. ಇದು ನಮ್ಮ ಪ್ರತಿಜ್ಞೆ' ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಕಾಂಗ್ರೆಸ್‌ನ ನಿಲುವನ್ನು ರಾಹುಲ್‌ ಪ್ರತಿಪಾದಿಸಿದ್ದಾರೆ. ಒಬಿಸಿ ಸಮುದಾಯಗಳನ್ನು ಮತ್ತೆ ತನ್ನತ್ತ ಸೆಳೆಯಲು ಕಾಂಗ್ರೆಸ್‌ ಕೆಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ. ತಮ್ಮ ಪಕ್ಷವು ಜಾತಿ ಗಣತಿಯ ಪರವಾಗಿದೆ ಎಂದು ಇದೇ ಏಪ್ರಿಲ್‌ 16ರಂದು ರಾಹುಲ್‌ ಅವರು ಕೋಲಾರದಲ್ಲಿ ಘೋಷಿಸಿದ್ದರು. ಯು‍ಪಿಎ-2 ಸರ್ಕಾರದ ಅವಧಿಯಲ್ಲಿ ನಡೆಸಲಾಗಿದ್ದ ಜಾತಿ ಗಣತಿಯ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತಲೇ ಬಂದಿದೆ. ಎಎಪಿ ಕೂಡ ಬಿಜೆಪಿ ಮೇಲೆ ಜಾತಿ ಗಣತಿಗೆ ಸಂಬಂಧಿಸಿ ಹರಿಹಾಯ್ದಿದೆ. ಪ್ರಧಾನಿಯವರು ಜಾತಿ ಗಣತಿಯಿಂದ ಓಡಿ ಹೋಗುತ್ತಿದ್ದಾರೆ ಎಂದು ಎಎಪಿಯ ಸಂಜಯ್‌ ಸಿಂಗ್‌ ಆಪಾದಿಸಿದ್ದಾರೆ. 'ಅವರು (ಬಿಜೆಪಿ) ಒಬಿಸಿ ದಲಿತ ಬುಡಕಟ್ಟು ಮತ್ತು ಶೋಷಿತ ಜನರ ವಿರುದ್ಧವಾಗಿದ್ದಾರೆ. ಹಾಗಾಗಿಯೇ ಜಾತಿ ಗಣತಿ ನಡೆಸಲು ಅವರು ಸಿದ್ಧರಿಲ್ಲ. ದೇಶದಾದ್ಯಂತ ಜಾತಿ ಗಣತಿ ನಡೆಸಬೇಕು' ಎಂದು ಅವರು ಆಗ್ರಹಿಸಿದ್ದಾರೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries