ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಕ್ಯಾಂಪಸ್‌ನಲ್ಲಿ ದೇಶ ವಿರೋಧಿ ಘೋಷಣೆಗಳು ಪುನರಾವರ್ತನೆಗೊಳ್ಳುತ್ತಿದ್ದು ಈ ಬಗ್ಗೆ ಪರಿಶೀಲನೆ ನಡೆಸಲು ಸಮಿತಿ ರಚಿಸುವ ಕುರಿತು ಚಿಂತನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
0
samarasasudhi
ಅಕ್ಟೋಬರ್ 03, 2023
ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಕ್ಯಾಂಪಸ್‌ನಲ್ಲಿ ದೇಶ ವಿರೋಧಿ ಘೋಷಣೆಗಳು ಪುನರಾವರ್ತನೆಗೊಳ್ಳುತ್ತಿದ್ದು ಈ ಬಗ್ಗೆ ಪರಿಶೀಲನೆ ನಡೆಸಲು ಸಮಿತಿ ರಚಿಸುವ ಕುರಿತು ಚಿಂತನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಕ್ಯಾಂಪಸ್ ಆವರಣದ ಸ್ಕೂಲ್ ಆಫ್ ಲ್ಯಾಂಗ್ವೇಜಸ್ ಕಟ್ಟಡದ ಮೇಲೆ 'ಭಾರತ ಆಕ್ರಮಿತ ಕಾಶ್ಮೀರ', 'ಮುಕ್ತ ಕಾಶ್ಮೀರ', 'ಭಗವಾ ಜಲೇಗಾ' ಘೋಷಣೆಗಳನ್ನು ಬರೆದ ಮರುದಿನ ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರಗಳು ವೈರಲ್ ಆಗಿದ್ದವು.
ಗೋಡೆಗಳ ಮೇಲೆ ಘೋಷಣೆಗಳ ಬರಹವಿದ್ದ ಸ್ಥಳದಲ್ಲಿ ಜೆಎನ್‌ಯು ಆಡಳಿತ ಬಣ್ಣವನ್ನು ಬಳಿಸಿದೆ.
'ಮುಖ್ಯ ಭದ್ರತಾ ಅಧಿಕಾರಿಯ ವರದಿ ಮತ್ತು ಸಲಹೆಗಳ ನಿರೀಕ್ಷೆಯಲ್ಲಿದ್ದೇವೆ. ವರದಿ ಸಲ್ಲಿಕೆಯಾಗುತ್ತಿದ್ದಂತೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆಗಳು ಆಗಾಗ್ಗೆ ಮರುಕಳಿಸುತ್ತಿದ್ದು, ಪರಿಶೀಲನೆಗಾಗಿ ಸಮಿತಿ ರಚಿಸುವ ಆಲೋಚನೆಯಿದೆ' ಎಂದು ಜೆಎನ್‌ಯು ಆಡಳಿತಾಧಿಕಾರಿ ಸತೀಶ್ ಚಂದ್ರ ಗಾರ್ಕೋಟಿ ತಿಳಿಸಿದ್ದಾರೆ.