HEALTH TIPS

ನವದೆಹಲಿಯಲ್ಲಿ ಕೆ.ಕೆ.ಸ್ವಾಮಿಕೃಪಾ ಅವರಿಗೆ ರಾಷ್ಟ್ರೀಯ ಸೇವಾರತ್ನ ಪ್ರಶಸ್ತಿ ಪ್ರಧಾನ


              ಬದಿಯಡ್ಕ: ಮೊಗೇರ ಸರ್ವೀಸ್ ಸೊಸೈಟಿ ಎಂಬ ಯುವಜನರ ಸೇವಾಸಂಘಟನೆಯನ್ನು ಹುಟ್ಟು ಹಾಕಿ ಅದರ ನೇತೃತ್ವ ಸ್ಥಾನದಲ್ಲಿದ್ದು, ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸಿ ಯಶಸ್ವಿಯಾಗಿರುವ ಕೃಷ್ಣ ಕೆ.ಕೆ. ಸ್ವಾಮಿಕೃಪಾ ಅವರಿಗೆ ನವದೆಹಲಿ ಆಂಧ್ರ ಭವನ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. 

                ಭಾನುವಾರ ಜರಗಿದ ಸಮಾರಂಭದಲ್ಲಿ ಬಿಎಸ್‍ಎ ರಾಷ್ಟ್ರೀಯ ಅಧ್ಯಕ್ಷ ನಲ್ಲ ರಾಧಾಕೃಷ್ಣನ್ ಅವರು ಪ್ರಶಸ್ತಿ ವಿತರಿಸಿದರು. ಸಮಾಜ ಕಲ್ಯಾಣ ಇಲಾಖೆ ಹಾಗೂ ಉದ್ಯೋಗ ಮತ್ತು ಎಸ್.ಸಿ.ಎಸ್.ಟಿ. ಅಭಿವೃದ್ಧಿ ಇಲಾಖೆಯ ಕೇಂದ್ರ ಸಚಿವ ರಾಜ್ ಕುಮಾರ್ ಆನಂದ್‍ಜಿ, ಕರೋಲ್‍ಬಾಗ್ ಶಾಸಕ ವೆಂಕಟೇಶ ರವಿಜಿ ಸೇರಿದಂತೆ ಹಲವಾರು ಗಣ್ಯರು, ಅತಿಥಿಗಳು ಮತ್ತು ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಮೊಗೇರ ಸರ್ವೀಸ್ ಸೊಸೈಟಿ ಕಾಸರಗೋಡು ಸಂಘಟನೆಗೆ ನೀಡಿದ ಅತ್ಯುತ್ತಮ ಸೇವಾ ಸಂಘ ರಾಷ್ಟ್ರೀಯ ಪ್ರಶಸ್ತಿ-2023ನ್ನು ಕಾರ್ಯದರ್ಶಿ ಕೃಷ್ಣ ಕೆ.ಕೆ.ಸ್ವಾಮಿಕೃಪಾ ಅವರು ಪಡೆದುಕೊಂಡರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries