ಮಂಜೇಶ್ವರ: ಭಾರತೀಯ ಕಿಸಾನ್ ಸಂಘ ಮೀಂಜ ಘಟಕದ ಸಮಾವೇಶ ಮೀಯಪದವು ಶಾಲಾ ವಠಾರದಲ್ಲಿ ಜರಗಿತು. ಡಿಸೆಂಬರ್ 15ರಂದು ತಿರುವನಂತಪುರದಲ್ಲಿ ಜರುಗಲಿರುವ ರೈತರ ಹಕ್ಕುಗಳ ಘೋಷಣಾ ರ್ಯಾಲಿಯ ಬಗ್ಗೆ ಸದಾನಂದ ಶೆಟ್ಟಿ ಕೊಮ್ಮಂಡ ಸಮಗ್ರ ಮಾಹಿತಿ ನೀಡಿದರು. ಕೃಷಿಕರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಉದ್ಯೋಗ ಖಾತರಿ ವತಿಯಿಂದ ಭತ್ತದ ಕೃಷಿ ಕೆಲಸವನ್ನು ಇನ್ನಿತರ ಕೃಷಿ ಕೆಲಸ ಮಾಡಲು ಮುಂದೆ ಬರಬೇಕೆಂದು ಪಂಚಾಯತಿ ಅಧಿಕಾರಿಗಳಿಗೆ ವಿನಂತಿಸಲಾಯಿತು. ಡಾ.ಜಯಪ್ರಕಾಶ ನಾರಾಯಣ, ದಿವಾಕರ ರೈ, ಗಣೇಶ ಅರಿಯಾಳ, ರಾಧಾಕೃಷ್ಣ ರೈ ಚರ್ಚೆಯಲ್ಲಿ ಪಾಲ್ಗೊಂಡರು. ಸತೀಶ್ಚಂದ್ರ ಸ್ವಾಗತಿಸಿ, ಜಗನ್ನಾತ ಮಾಸ್ತರ್ ವಂದಿಸಿದರು.

