ಬದಿಯಡ್ಕ: ಕುಂಬಳೆ ಉಪಜಿಲ್ಲಾ ಶಾಲಾ ಕ್ರೀಡಾಕೂಟ ಬದಿಯಡ್ಕ ಪಂಚಾಯಿತಿಯ ಬೋಳುಕಟ್ಟೆ ಮೈದಾನದಲ್ಲಿ ಆರಂಭಗೊಂಡಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ನಾಲ್ಕು ದಿವಸಗಳ ಕಾಲ ನಡೆಯಲಿರುವ ಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಾ ಬಾರಡ್ಕ ಸಮಾರಂಭ ಉದ್ಘಾಟಿಸಿದರು.
ಈ ಸಂದರ್ಭ ಮೈದಾನದಲ್ಲಿ ನಡೆದ ಆಕರ್ಷಕ ಪಥಸಂಚಲನದಲ್ಲಿ ಎನ್‍ಸಿಸಿ, ಸ್ಕೌಟ್, ಎಸ್‍ಪಿಸಿ, ರೆಡ್‍ಕ್ರಾಸ್ ವಿದ್ಯಾರ್ಥಿಗಳು, ಕ್ರೀಟಾಪಟುಗಳು ಪಾಲ್ಗೊಂಡಿದ್ದರು. ಶಾಸಕ ಎನ್.ಎ ನೆಲ್ಲಕುನ್ನು ಗೌರವ ವಂದನೆ ಸ್ವೀಕರಿಸಿದರು. ಕ್ರೀಡಾಜ್ಯೋತಿಯನ್ನು ಶಾಸಕ ಎನ್.ಎ ನೆಲ್ಲಿಕುನ್ನು ಸ್ವೀಕರಿಸಿ, ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಬದಿಯಡ್ಕ ಸರ್ಕಾರಿ ಪ್ರೌಢಶಾಲಾ ಆತಿಥ್ಯದಲ್ಲಿ ಕ್ರೀಡಾಕೂಟ ನಡೆಯುತ್ತಿದ್ದು, ಉಪಜಿಲ್ಲೆಯ 85ಶಾಲೆಗಳ 5ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಘಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಅ. 5, ಅ. 6 ಹಾಗೂ ಅ. 9ರಂದು ಕ್ರೀಡಾಕೂಟ ನಡೆಯಲಿರುವುದು.



