ತಿರುವನಂತಪುರ: ತಿರುವನಂತಪುರ ಕ್ಲಬ್‍ನ ಕ್ವಾರ್ಟರ್ಸ್‍ನಲ್ಲಿ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ಸಿಪಿಎಂನ ಮಾಜಿ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಬಾವ, ಯುನೈಟೆಡ್ ಎಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಎಸ್ ಆರ್ ವಿನಯಕುಮಾರ್ ಸೇರಿದಂತೆ ಒಂಬತ್ತು ಮಂದಿಯನ್ನು ಮ್ಯೂಸಿಯಂ ಪೋಲೀಸರು ಬಂಧಿಸಿದ್ದಾರೆ.
ಗುಂಪೆÇಂದು ಹಣಕ್ಕಾಗಿ ಇಸ್ಪೀಟು ಆಡುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಪೋಲೀಸರು ಸಂಜೆ ಸ್ಥಳಕ್ಕೆ ತಲುಪಿದಾಗ, ಕೋಣೆಯಲ್ಲಿ ಒಂಬತ್ತು ಜನರಿದ್ದರು. ಕ್ವಾರ್ಟರ್ಸ್ ಮೇಲೆ ದಾಳಿ ನಡೆಸಿದ ಪೋಲೀಸರು ಕೊಠಡಿಯಲ್ಲಿದ್ದ ಸುಮಾರು 5.50 ಲಕ್ಷ ರೂ.ವಶಕ್ಕೆ ಪಡೆದಿದ್ದಾರೆ.
ಜೂಜಾಟದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ವಿವಿಧೆಡೆಗಳಿಂದ ಜನರ ಜಮಾಯಿಸಿದ್ದರು ಎಂದು ಪೋಲೀಸರು ತಿಳಿಸಿದ್ದಾರೆ.
ಕೊಡಿಯೇರಿ ಬಾಲಕೃಷ್ಣನ್ ಅವರ ಪತ್ನಿ ವಿನೋದಿನಿ ಅವರ ಸಹೋದರ ವಿನಯಕುಮಾರ್ ಅವರು ಸಾರ್ವಜನಿಕ ವಲಯದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಕಾರಣ ಕ್ವಾರ್ಟರ್ಸ್ ಮಂಜೂರು ಮಾಡಲಾಗಿತ್ತು. ಎಫ್‍ಐಆರ್‍ನಲ್ಲಿ ಮೊದಲು ನಮೂದಿಸಿರುವುದು ಅವರ ಹೆಸರು.
ಏತನ್ಮಧ್ಯೆ, ವಿನಯಕುಮಾರ್ ಅವರಿಗೆ ನೀಡಲಾದ ಕ್ವಾರ್ಟರ್ಸ್‍ನಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ತನಗೆ ಯಾವುದೇ ಅರಿವಿಲ್ಲ ಎಂದವರು ಹೇಳಿಕೊಂಡಿದ್ದಾರೆ ಮತ್ತು ಸ್ಥಳಕ್ಕೆ ಪ್ರವೇಶವನ್ನು ಸ್ನೇಹಿತರಿಗೆ ನೀಡಿದ್ದೇನೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.
ಈ ಘಟನೆಯು ರಾಜಕೀಯ ವಿವಾದವನ್ನು ಹುಟ್ಟುಹಾಕಿದ್ದು, ಪ್ರತಿಪಕ್ಷ ನಾಯಕರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ದಾಳಿ ಮತ್ತು ಬಂಧನದ ಸಮಯವನ್ನು ಪ್ರಶ್ನಿಸಿರುವರು.


