ಕಾಸರಗೋಡು: ನಗರ ಸಭೆಯ ಭ್ರಷ್ಟಾಚಾರ, ದುರಾಡಳಿತ ಹಾಗೂ ಅಭಿವೃದ್ಧಿ ಕುಂಠಿತದ ವಿರುದ್ಧ ಬಿಜೆಪಿ ನಗರಸಭಾ ಸಮಿತಿಯ ಆಶ್ರಯದಲ್ಲಿ ನಗರಸಭಾ ಕಚೇರಿ ಎದುರು ಧರಣಿ ನಡೆಸಲಾಯಿತು.
ಆರೋಗ್ಯ ವಲಯದ ವಿರುದ್ಧ ನಿರ್ಲಕ್ಷ್ಯ ಧೋರಣೆ, ಬೀದಿದೀಪ-ಮಾಲಿನ್ಯ ಸಂಸ್ಕರಣೆ-ಒಳಚರಂಡಿ ಅವ್ಯವಸ್ಥೆ, ಶಾಲೆಗಳಿಗೆ ಅನುದಾನ ಒದಗಿಸುವಲ್ಲಿ ಪಕ್ಷಪಾತ ಧೋರಣೆ, ರಿಂಗ್ ಕಾಂಪೋಸ್ಟ್ ಹೆಸರಲ್ಲಿ ಭ್ರಷ್ಟಾಚಾರ, ಮೀನುಕಾರ್ಮಿಕರ ಅವಗಣನೆ, ಪ-ವರ್ಗ, ಪ-ಜಾತಿ ವಿಭಾಗದ ಅವಗಣನೆ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಲ್ಲಿನ ವೈಫಲ್ಯ ಖಂಡಿಸಿ ಧರಣಿ ಆಯೋಜಿಸಲಾಗಿತ್ತು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಕಾಸರಗೋಡು ಜಿಲ್ಲಾ ಪ್ರಬಾರಿ ಕೆ. ರಂಜಿತ್ ಧರಣಿ ಉದ್ಘಾಟಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಹಾಗೂ ನಗರಸಭೆ ಸದಸ್ಯ ಕೆ. ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಪಿ. ರಮೇಶ್, ಗುರುಪ್ರಸಾದ್ ಪ್ರಭು, ಸುಕುಮಾರ ಕುದುರೆಪಾಡಿ, ಅಶ್ವಿನಿ ಜಿ.ನಾಯಕ್, ಕೆ. ಜಿ. ಮನೋಹರನ್, ಕೆ. ಜಿ. ರಾಮ್ ಮೋಹನ್, ರವೀಂದ್ರ ಪೂಜಾರಿ, ವರಪ್ರಸಾದ್ ಕೋಟಕಣಿ, ಅರುಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಉಮಾ ಕಡಪುರ ಸ್ವಾಗತಿಸಿದರು.

