ಪೆರ್ಲ : ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಯುಡಿಎಫ್ ನಡೆಸಲಿರುವ ಸೆಕ್ರೆಟರಿಯೇಟ್ ಮುಷ್ಕರದ ಪ್ರಚಾರಾರ್ಥದ ಅಂಗವಾಗಿ ಎಣ್ಮಕಜೆ ಯುಡಿಎಫ್ ಸಮಿತಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್. ಪಾದಯಾತ್ರೆ ಉದ್ಘಾಟಿಸಿ ಮಾತನಾಡಿ, ರಾಜ್ಯವನ್ನಾಳುವ ಎಡರಂಗ ನೇತೃತ್ವದ ಸರ್ಕಾರ ಎಲ್ಲಾ ರಂಗದಲ್ಲೂ ವಿಫಲತೆ ಕಂಡುಕೊಳ್ಳುತ್ತಿದ್ದು ಬೆಲೆ ಏರಿಕೆ, ಭ್ರಷ್ಟಾಚಾರ, ಉದ್ಯೋಗ ಸೃಷ್ಢಿಯಲ್ಲಿ ಪಕ್ಷಪಾತಿಯ ನಿಲುವಿನ ವಿರುದ್ಧ ಜನ ಬೀದಿಗಿಳಿದು ಪ್ರತಿಭಟಿಸುತ್ತಿದ್ದರೂ ಆಡಳಿತರೂಢರು ತುಟಿ ಬಿಚ್ಚದಿರುವುದು ಖೇದನೀಯ ಎಂದರು.
ಎಣ್ಮಕಜೆ ಯುಡಿಎಫ್ ಸಂಚಾಲಕ ರವೀಂದ್ರನಾಥ ನಾಯಕ್ ಶೇಣಿ ತೋಟದಮನೆ ಅಧ್ಯಕ್ಷತೆವಹಿಸಿದ್ದರು. ಮುಸ್ಲಿಂ ಲೀಗ್ ನೇತಾರ ಆದಿ ತಂಙಳ್ ಮೊಗ್ರಾಲ್ ಮುಖ್ಯ ಭಾಷಣಗೈದರು. ಎಣ್ಮಕಜೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಗಾಂಭೀರ್, ಎಣ್ಮಕಜೆ ಮುಸ್ಲಿಂ ಲೀಗ್ ಸಮಿತಿ ಅಧ್ಯಕ್ಷ ಎ.ಕೆ.ಶೇರಿಫ್, ಬ್ಲಾಕ್ ಕಾಂಗ್ರೆಸ್ ನೇತಾರ ಅಮು ಅಡ್ಕಸ್ಥಳ ಮೊದಲಾದವರು ಮಾತನಾಡಿದರು. ಹಮೀದಾಲಿ ಕಂದಲ್ ಸ್ವಾಗತಿಸಿ, ಸಿದ್ಧೀಕ್ ವಳಮುಗೇರ್ ವಂದಿಸಿದರು.ಉಕ್ಕಿನಡ್ಕದಿಂದ ಆರಂಭಗೊಂಡ ಪಾದಯಾತ್ರೆಗೆ ಎಣ್ಮಕಜೆ ಮಂಡಲ ಕಾಂಗ್ರೆಸ್, ಯೂತ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಮುಸ್ಲಿಂಲೀಗ್, ಯೂತ್ ಲೀಗ್, ಎಂಎಸ್.ಎಫ್ ಕಾರ್ಯಕರ್ತರು ನೇತೃತ್ವ ನೀಡಿದರು.

.jpg)
.jpg)
.jpg)
