ಕೊಚ್ಚಿ: ಪತ್ನಿಗೆ ಅಡುಗೆ ಗೊತ್ತಿಲ್ಲ ಎಂಬುದೇ ವಿಚ್ಛೇದನಕ್ಕೆ ಕಾರಣವಲ್ಲ ಎಂದು ಹೈಕೋರ್ಟ್ ಹೇಳಿದೆ. ವಿವಾಹ ಸಂಬಂಧದಲ್ಲಿ ಇದನ್ನು ಕ್ರೌರ್ಯವಾಗಿ ಕಾಣಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರ ಮತ್ತು ಸೋಫಿ ಥಾಮಸ್ ಅವರ ಆದೇಶವು ಯುವಕ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದೆ.
ಪತ್ನಿಗೆ ಅಡುಗೆ ಮಾಡುವುದು ಗೊತ್ತಿಲ್ಲ, ತನಗೆ ಊಟ ತಯಾರಿಸಿ ಕೊಡುವುದಿಲ್ಲ ಎಂದು ಪತಿ ಅರ್ಜಿಯಲ್ಲಿ ತಿಳಿಸಿದ್ದಾರೆ. ವಿವಾಹ ಸಂಬಂಧದಲ್ಲಿ ಇದನ್ನು ಕ್ರೌರ್ಯವಾಗಿ ಕಾಣಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದು ವಿಚ್ಛೇದನಕ್ಕೆ ಕಾರಣವಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಈ ಜೋಡಿ 2012 ರಲ್ಲಿ ವಿವಾಹವಾದವರು. ತನ್ನ ಸಂಬಂಧಿಕರ ಮುಂದೆ ಪತ್ನಿ ಅನುಚಿತವಾಗಿ ವರ್ತಿಸುತ್ತಾಳೆ ಮತ್ತು ತನ್ನನ್ನು ಗೌರವಿಸುವುದಿಲ್ಲ ಎಂದು ಪತಿ ಅರ್ಜಿಯಲ್ಲಿ ಆರೋಪಿಸಿದ್ದಾನೆ. ಮಹಿಳೆ 2013ರಲ್ಲಿ ಗಂಡನ ಮನೆ ತೊರೆದು ಆತನ ವಿರುದ್ಧ ಪೋಲೀಸ್ ದೂರು ದಾಖಲಿಸಿದ್ದಳು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ತನ್ನ ಉದ್ಯೋಗದಿಂದ ಮುಕ್ತಿ ಕೊಡುವಂತೆ ಉದ್ಯೋಗದಾತನಿಗೆ ಇ-ಮೇಲ್ ಕಳುಹಿಸಿದ್ದಾನೆ ಎಂದೂ ಪತಿ ಆರೋಪಿಸಿದ್ದಾರೆ. ತಮ್ಮ ನಡುವಿನ ಸಮಸ್ಯೆ ಬಗೆಹರಿಸಲು ಮಧ್ಯಪ್ರವೇಶಿಸುವಂತೆ ಮನವಿ ಮಾಡಲು ಇಮೇಲ್ ಕಳುಹಿಸಿದ್ದರು ಎಂಬುದು ಪತ್ನಿ ವಿವರಣೆ ನೀಡಿದ್ದಳು.





