HEALTH TIPS

ಜಲವಿದ್ಯುತ್ ಯೋಜನೆಗಳಿಂದ ಹಿಮಾಲಯ ಶ್ರೇಣಿಯಲ್ಲಿ ದುರಂತ: ತಜ್ಞರು

              ವದೆಹಲಿ :ಸೂಕ್ಷ್ಮ ಹಿಮಾಲಯ ಪ್ರಾಂತ್ಯದಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿ ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸುತ್ತಿರುವುದರಿಂದ ಗಿರಿ ರಾಜ್ಯಗಳಲ್ಲಿ ದುರಂತಗಳು ಸಂಭವಿಸುತ್ತಿವೆ ಎಂದು ಪರಿಸರ ತಜ್ಞರು ಹಾಗೂ ಕಾರ್ಯಕರ್ತರು ಎಚ್ಚರಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

            ಮಂಜುಗಡ್ಡೆ ಸರೋವರವು ಸ್ಫೋಟಿಸಿದ್ದರಿಂದ ಸಿಕ್ಕಿಂನ ಲೋನಾಕ್ ಸರೋವರದಲ್ಲಿ ಪ್ರವಾಹ ಸೃಷ್ಟಿಯಾಗಿ ಮಂಗನ್, ಗ್ಯಾಂಗ್ಟಕ್, ಪಾಕ್ಯಾಂಗ್ ಹಾಗೂ ನಮ್ಚಿ ಜಿಲ್ಲೆಗಳಲ್ಲಿ ಭಾರಿ ಹಾನಿಗೆ ಕಾರಣವಾಗಿತ್ತು. ಈ ಘಟನೆಯು ರಾಜ್ಯದಲ್ಲಿನ ಭಾರಿ ಜಲವಿದ್ಯುತ್ ಯೋಜನೆಯ ಮುಖ್ಯ ಸಾಧನವಾದ ತೀಸ್ತಾ III ಎಂದು ಚುನ್ಗಾಂಗ್ ಅಣೆಕಟ್ಟೆಯನ್ನು ಉಲ್ಲಂಘಿಸಿರುವುದರಿಂದಲೂ ಸಂಭವಿಸಿದೆ.

ತೀಸ್ತಾ ನದಿಗೆ ಅಡ್ಡಲಾಗಿ ಸರಣಿ ಅಣೆಕಟ್ಟುಗಳನ್ನು ನಿರ್ಮಿಸಿರುವುದರಿಂದ ಈ ದುರಂತ ಸಂಭವಿಸಿದ್ದು, ಪ್ರಸ್ತಾವಿತ ತೀಸ್ತಾ IV ಅಣೆಕಟ್ಟು ನಿರ್ಮಾಣವನ್ನು ರದ್ದುಗೊಳಿಸಬೇಕು ಎಂದು ಪರಿಸರ ತಜ್ಞರು ಹಾಗೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.

               ಕಳೆದ ಎರಡು ದಶಕಗಳಲ್ಲಿನ ಹಲವಾರು ಸಂದರ್ಭಗಳಲ್ಲಿ ಸಿಕ್ಕಿಂನಲ್ಲಿ ಭಾರಿ ಪ್ರಮಾಣದ ಮಂಜುಗಡ್ಡೆ ಸರೋವರಗಳ ಸ್ಫೋಟದಿಂದ ಪ್ರವಾಹವಾಗುವ ಸಾಧ್ಯತೆ ಇದ್ದು, ಭಾರಿ ಪ್ರಮಾಣದ ಜೀವ ಮತ್ತು ಆಸ್ತಿಪಾಸ್ತಿ ಹಾನಿಯಾಗಲಿದೆ ಎಂದು ಸರ್ಕಾರಿ ಸಂಸ್ಥೆಗಳು ಹಾಗೂ ಸಂಶೋಧನಾ ಅಧ್ಯಯನಗಳು ಎಚ್ಚರಿಸಿದ್ದವು.

            ತೀಸ್ತಾ ನದಿಗೆ ಅಡ್ಡಲಾಗಿ ಸ್ಥಾಪಿಸಲಾಗಿರುವ ಬಹುತೇಕ ಜಲವಿದ್ಯುತ್ ಯೋಜನೆಗಳು ಇಂತಹ ಘಟನೆಗಳನ್ನು ಎದುರಿಸುವಲ್ಲಿ ತೀರಾ ದುರ್ಬಲವಾಗಿವೆ ಎಂದು 2015ರಲ್ಲಿ ಕೇಂದ್ರ ಜಲ ಆಯೋಗವು ನಡೆಸಿದ್ದ ಅಧ್ಯಯನದಲ್ಲಿ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿತ್ತು.

              "ಇತ್ತೀಚಿನ ಪ್ರವಾಹದ ಸಂದರ್ಭದಲ್ಲಿ 1,200 ಮೆವಾ ಸಾಮರ್ಥ್ಯದ ತೀಸ್ತಾ III ಜಲವಿದ್ಯುತ್ ಯೋಜನೆಯು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ. ಈ ಅಣೆಕಟ್ಟೆಯನ್ನು ಲೋನಾಕ್ ಸರೋವರದಿಂದ ಕೇವಲ 30 ಕಿಮೀ ದೂರದಲ್ಲಿ ನಿರ್ಮಿಸಲಾಗಿದೆ. ಹಾಲಿ ರಾಜ್ಯ ಸರ್ಕಾರವು ಕಳಪೆ ಕಾಮಗಾರಿಗಾಗಿ ಈ ಹಿಂದಿನ ಸರ್ಕಾರವನ್ನು ದೂಷಿಸುತ್ತಿದೆ. ಹಿಂದಿನ ಸರ್ಕಾರವು ಹಿಮಗಡ್ಡೆ ಸರೋವರವು ಸ್ಫೋಟಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳುತ್ತಿದೆ. ಆದರೆ, ಯಾರೊಬ್ಬರೂ ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣ ಮಾಡಿರುವುದರ ಕುರಿತು ಪ್ರಶ್ನಿಸುತ್ತಿಲ್ಲ. ಇದು ನೈಸರ್ಗಿಕ ದುರಂತವಲ್ಲ ಮತ್ತು ನಾವು ಈ ದುರಂತಕ್ಕೆ ಹೊಣೆಗಾರಿಕೆ ಮತ್ತು ಪ್ರಸ್ತಾವಿತ ತೀಸ್ತಾ IV ಯೋಜನೆಯನ್ನು ರದ್ದುಗೊಳಿಸುವಂತೆ ಆಗ್ರಹಿಸುತ್ತಿಲ್ಲ" ಎಂದು ಸ್ಥಳೀಯ ಪರಿಸರ ಹೋರಾಟ ಸಂಘಟನೆಯಾದ ಅಫೆಕ್ಟೆಡ್ ಸಿಟಿಝನ್ಸ್ ಆಫ್ ತೀಸ್ತಾ(ಆಯಕ್ಟ್)ದ ಗ್ಯಾಸ್ಟೊ ಲೆಪ್ಚಾ ಹೇಳಿದ್ದಾರೆ.

              ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿರುವುದರಿಂದ ಹಿಮಾಲಯ ತಪ್ಪಲಿನ ಹಿಮಗಡ್ಡೆಗಳು ವೇಗವಾಗಿ ಕರಗತೊಡಗಿವೆ. ಇದಲ್ಲದೆ ನೆರೆಯ ನೇಪಾಳದಲ್ಲಿ ಇದಕ್ಕೂ ಮುನ್ನಾ ದಿನ ಸಂಭವಿಸಿದ ಮೇಘ ಸ್ಫೋಟ ಹಾಗೂ ಭೂಕಂಪವು ಹಿಮಗಡ್ಡೆ ಸ್ಫೋಟಕ್ಕೆ ಕಾರಣವಾಗಿದೆ. ಇದರೊಂದಿಗೆ ತೀಸ್ತಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟೆಯಿಂದಾಗಿ ಪ್ರವಾಹದ ಪರಿಣಾಮ ಮತ್ತು ತೀವ್ರತೆಯು ಅಂದಾಜು ಮೀರಿ ಗಂಭೀರವಾಗಿತ್ತು. ಇದರಿಂದ ಗಿರಿ ತಪ್ಪಲಿನಲ್ಲಿ ಭಾರಿ ಪ್ರಮಾಣದ ಹಾನಿ ಸಂಭವಿಸಿತು.

             ತೀಸ್ತಾ III ಅಣೆಕಟ್ಟು ಪತನವಾದಾಗ ಟನ್ ಗಟ್ಟಲೆ ಕಾಂಕ್ರೀಟ್ ರಾಶಿಯೂ ಭಾರಿ ಪ್ರವಾಹದೊಂದಿಗೆ ಅಪ್ಪಳಿಸಿದ್ದರಿಂದ ಪ್ರವಾಹದ ಭೀಕರತೆ ಮತ್ತಷ್ಟು ವಿಷಮಿಸಿತು.

          ತೀಸ್ತಾ III ಅಣೆಕಟ್ಟೆಯ ಕಿಂಡಿಗಳನ್ನು ತೆರೆಯುವಲ್ಲಿ ವಿಫಲವಾಗಿದ್ದರಿಂದ ಮಂಜುಗಡ್ಡೆ ಸರೋವರ ಸ್ಪೋಟದ ತೀವ್ರತೆ ಇಷ್ಟು ಭೀಕರವಾಗಲು ಕಾರಣ ಎನ್ನಲಾಗಿದೆ.

               ಡೋಂಗು ಹಾಗೂ ಸಮೀಪದ ಪ್ರಾಂತ್ಯಗಳಲ್ಲಿ ಅಣೆಕಟ್ಟುಗಳ ಸರಣಿಯನ್ನು ನಿರ್ಮಿಸುವುದಕ್ಕೆ ಕಳೆದ ಎರಡು ದಶಕಗಳಿಂದ ಅಫೆಕ್ಟೆಡ್ ಸಿಟಿಝನ್ಸ್ ಆಫ್ ತೀಸ್ತಾ ಸಂಘಟನೆಯು ಪ್ರತಿರೋಧ ಒಡ್ಡುತ್ತಾ ಬರುತ್ತಿದೆ.

               ಆದರೆ, ಸ್ಥಳೀಯ ವಿರೋಧಗಳನ್ನು ನಿರಂತರವಾಗಿ ಅಗೌರವಿಸಿದ ಪ್ರಾಧಿಕಾರಗಳು ಎಲ್ಲ ಸಾಮಾಜಿಕ ಮತ್ತು ಪರಿಸರ ನಿಯಮಾವಳಿಗಳನ್ನು ನಿರ್ಲಕ್ಷಿಸಿದವು. ದಕ್ಷಿಣ ಲೋನಾಕ್ ಸರೋವರದಿಂದ ತೀಸ್ತಾ ನದಿ ಅಣೆಕಟ್ಟೆಗೆ ನಿರ್ದಿಷ್ಟ ಅಪಾಯವಿದೆ ಎಂಬ ಸಂಗತಿ ಸರ್ಕಾರಕ್ಕೆ ತಿಳಿದಿತ್ತು ಎನ್ನುತ್ತಾರೆ ಲೆಪ್ಚಾ.

           ದುರಂತಗಳ ಸಂದರ್ಭದಲ್ಲಿ ಅವನ್ನು ದ್ವಿಗುಣಗೊಳಿಸುವ ಶಕ್ತಿಯಾಗಿ ಅಣೆಕಟ್ಟೆಗಳು ಕಾರ್ಯನಿರ್ವಹಿಸುತ್ತವೆ. ಬಹುತೇಕ ಜೀವಹಾನಿಗಳು ಅಣೆಕಟ್ಟೆಯ ಸಮೀಪವೇ ಸಂಭವಿಸಿವೆ ಎಂದು ಸೌತ್ ಏಶ್ಯಾ ನೆಟ್ ವರ್ಕ್ ಆನ್ ಡ್ಯಾಮ್ಸ್, ರಿವರ್ಸ್ ಆಯಂಡ್ ಪೀಪಲ್ (SANDRP)ಯ ಸಮನ್ವಯಕಾರ ಹಿಮಾಂಶು ಥಕ್ಕರ್ ಹೇಳುತ್ತಾರೆ.

                "ಇಂಡೊ-ಟಿಬೆಟನ್ ಗಡಿ ಪೊಲೀಸರು ನೀರಿನ ಮಟ್ಟ ಏರಿಕೆಯಾಗುತ್ತಿರುವ ಕುರಿತು ಚುಂಗ್ತಾಂಗ್ ಜಿಲ್ಲಾಡಳಿತಕ್ಕೆ ರಾತ್ರಿ 10.40ರಿಂದ 11.40ರವರೆಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳಿಗೆ ಅಣೆಕಟ್ಟೆಯ ಕಿಂಡಿ ಬಾಗಿಲುಗಳನ್ನು ತೆರೆಯಲು ಒಂದು ಗಂಟೆ ಕಾಲಾವಕಾಶವಿತ್ತು. ವಿದ್ಯುನ್ಮಾನ ಚಾಲಿತ ಬಾಗಿಲುಗಳು ಒಂದು ನಿಮಿಷದೊಳಗೆ ತೆರೆದುಕೊಳ್ಳುತ್ತವೆ. ಯಾಂತ್ರಿಕ ಜಲ ದ್ವಾರಗಳು ತೆರೆದುಕೊಳ್ಳಲೂ ಕೂಡಾ ಕೇವಲ 15 ನಿಮಿಷ ಸಾಕು" ಎನ್ನುತ್ತಾರೆ ಅವರು.

            ಅಣೆಕಟ್ಟು ಸುರಕ್ಷತಾ ಕಾಯ್ದೆ, 2021 ಅಣಕಟ್ಟಿನ ನಿರ್ಮಾಣ ಗುಣಮಟ್ಟದ ಕುರಿತು ಮಾತ್ರ ಗಮನ ನೀಡುತ್ತದೆಯೆ ಹೊರತು ಕಾರ್ಯಾಚರಣೆ ಗುಣಮಟ್ಟದ ಕುರಿತಲ್ಲ. ಸುರಕ್ಷತಾ ಮೌಲ್ಯಮಾಪನಗಳು ಸಾರ್ವಜನಿಕ ಕ್ರಿಯೆಯಾಗಬೇಕಾದ ಅಗತ್ಯವಿದೆ" ಎಂದು ಅವರು ಹೇಳುತ್ತಾರೆ.

            ಹಲವಾರು ದಶಕಗಳಷ್ಟು ಹಳೆಯದಾದ ಅಣೆಕಟ್ಟೆಯ ಕಟ್ಟಡವು ಕಾಲಾನಂತರ ದುರ್ಬಲವಾದ ಮೇಲೆ ಅಂತಹ ಅಣೆಕಟ್ಟುಗಳ ಬಳಕೆಯನ್ನು ಸ್ಥಗಿತಗೊಳಿಸಬೇಕು ಎಂದು ಅಣೆಕಟ್ಟು ಸುರಕ್ಷತಾ ಕಾಯ್ದೆ 2021ರಲ್ಲಿ ಸೇರ್ಪಡೆ ಮಾಡಲು ಯೋಜಿಸಲಾಗಿತ್ತಾದರೂ, ನಂತರ ಆ ಪ್ರಸ್ತಾವವನ್ನು ಕಾಯ್ದೆಯಿಂದ ಕೈಬಿಡಲಾಯಿತು ಎನ್ನುತ್ತಾರೆ ಥಕ್ಕರ್. "ಅಪಾಯ ಸಾಧ್ಯತೆ ಇರುವ ಅಣೆಕಟ್ಟೆಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು ಎಂದು ಸಾರ್ವಜನಿಕ ಒತ್ತಡ ಹೇರಬೇಕಾದ ಅಗತ್ಯವಿದೆ" ಎಂದು ಅವರು ಹೇಳುತ್ತಾರೆ.

              ಅಣೆಕಟ್ಟು ಹಾಗೂ ರಸ್ತೆಗಳ ನಿರ್ಮಾಣ ಸಂದರ್ಭದಲ್ಲಿ ಪರಿಸರ ನಿಯಮಾವಳಿಗಳ ಉಲ್ಲಂಘನೆ, ನಿಯಂತ್ರಣವಿಲ್ಲದ ಪ್ರವಾಸೋದ್ಯಮ ಹಾಗೂ ಕ್ಷಿಪ್ರ ಕಾಂಕ್ರೀಟೀಕರಣದಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ಹಲವಾರು ದುರಂತಮಯ ಘಟನೆಗಳು ನಡೆದಿವೆ. ಈ ಪೈಕಿ ಪ್ರಮುಖ ಘಟನೆಗಳೆಂದರೆ, ಜನವರಿಯಲ್ಲಿ ಸಂಭವಿಸಿದ ಜೋಶಿಮಠದ ಭೂಕುಸಿತ ಹಾಗೂ ಫೆಬ್ರವರಿಯಲ್ಲಿ ನಡೆದ ದೋಡಾ ಭೂಕುಸಿತ ದುರಂತ ಹಾಗೂ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಸಂಭವಿಸಿದ ಪ್ರವಾಹಗಳು.

              ಈ ವರ್ಷದಲ್ಲಿ ಹಿಮಾಲಯ ಪ್ರಾಂತ್ಯದಲ್ಲಿ ಸಂಭವಿಸಿರುವ ಇತರ ದುರಂತಗಳಂತೆಯೆ ಸಿಕ್ಕಿಂ ಪ್ರವಾಹ ಕೂಡಾ ಆಗಿದ್ದು, ಹಿಮಾಲಯ ಪ್ರಾಂತ್ಯದ ಭೌಗೋಳಿಕ ಸೂಕ್ಷ್ಮತೆ ಹಾಗೂ ಸಾಂಸ್ಕೃತಿಕ ಪರಂಪರೆಯ ಬಗ್ಗೆ ನಿರ್ದಾಕ್ಷಿಣ್ಯ ಅಗೌರವ ತೋರಿರುವುದರಿಂದ ಈ ವೈರುಧ್ಯಮಯ ಬೆಳವಣಿಗೆಗಳು ನಡೆದಿವೆ ಎನ್ನುತ್ತಾರೆ ಪರಿಸರ ತಜ್ಞರು ಹಾಗೂ ಹೋರಾಟಗಾರರು.

              ಹಿಮಾಚಲ ಪ್ರದೇಶದ ಪರಿಸರ ಹೋರಾಟಗಾರ ಎಬೊ ಮಿಲಿ ಪ್ರಕಾರ, "ಅರುಣಾಚಲ ಪ್ರದೇಶದಲ್ಲಿ 1,500 ಹಿಮಗಡ್ಡೆ ಸರೋವರಗಳಿದ್ದು, ನನ್ನ ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದ ಮಂಜುಗಡ್ಡೆ ಸರೋವರಗಳಿವೆ. ಸರ್ಕಾರದ ಧೋರಣೆ ಹಾಗೂ ಅಣೆಕಟ್ಟು ಪ್ರಸ್ತಾವ ಮಾಡುವವರು ಈ ಕುರಿತು ಉಡಾಫೆಯಿಂದ ವರ್ತಿಸುತ್ತಿದ್ದಾರೆ. ಅಣೆಕಟ್ಟುಗಳನ್ನು ನಿರ್ಮಿಸಿದ ನಂತರ ದುರಂತಗಳನ್ನು ತಡೆಯಲು ಸಾಧ್ಯವಿಲ್ಲ" ಎಂದು ಹೇಳುತ್ತಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries