HEALTH TIPS

ಮಹುವಾ ಮೊಯಿತ್ರಾ ಜತೆಗಿನ ಫೋಟೋ ವೈರಲ್; ಇದು ಕೀಳುಮಟ್ಟದ ರಾಜಕೀಯ ಎಂದ ಶಶಿ ತರೂರ್

              ಕೊಟ್ಟಾಯಂ: ತೃಣಮೂಲೆ ಕಾಂಗ್ರೆಸ್​ ಸಂಸದೆ ಮಹುವಾ ಮೊಯಿತ್ರಾ ಜತೆಗೆ ಪಾರ್ಟಿ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ ಆದ ಬೆನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ನಾಯಕ ಶಶಿ ತರೂರ್ ಇದು ಕೀಳುಮಟ್ಟದ ರಾಜಕೀಯ ಎಂದು ಕಿಡಿಕಾರಿದ್ದಾರೆ.

             ಇದು ಸಂಸದೆ ಮಹುವಾ ಮೊಯಿತ್ರಾ ಅವರ ಜನುಮದಿನದಂದು ತೆಗೆಸಿಕೊಳ್ಳಲಾದ ಫೋಟೋಗಳು, ಕೆಲವರು ಇದು ರಹ್ಯಸ ಸಭೆ ಎಂದು ತಿರುಚಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ರೀತಿಯ ಕೊಳಕು ರಾಜಕಾರಣವನ್ನು ಹಿಂದೆಂದು ನೋಡಿರಲಿಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ.

                ಈ ಕುರಿತು ಕೇರಳದ ಕೊಟ್ಟಾಯಂನಲ್ಲಿ ಪ್ರತಿಕ್ರಿಯಿಸಿದ ಸಂಸದ ಶಶಿ ತರೂರ್, ಇದು ಕೀಳು ಮಟ್ಟದ ರಾಜಕಾರಣದ ಸ್ಪಷ್ಟ ನಿದರ್ಶನವಾಗಿದ್ದು, ನಾನು ಅಂದು ಆ ಮಗುವಿನ (ಮಹುವಾ ಮೊಯಿತ್ರಾ) ಹುಟ್ಟುಹಬ್ಬಕ್ಕೆ ತೆರಳಿದೆ. ಆಕೆ ನನಗಿಂತ 10-20 ವರ್ಷ ಚಿಕ್ಕವಳು. ಅವರ ಹುಟ್ಟುಹಬ್ಬದ ದಿನದಂದು 15 ಮಂದಿ ಹಾಜರಿದ್ದೆವು.

                 ಆ ಪಾರ್ಟಿಯಲ್ಲಿ ನನ್ನ ಸಹೋದರಿಯನ್ನು ಸಹ ಆಹ್ವಾನಿಸಲಾಗಿತ್ತು. ಅವರು ಸಹ ಅಲ್ಲಿ ಹಾಜರಿದ್ದರು. ಅದಾಗ್ಯೂ, ಕೆಲವರು ಉದ್ದೇಶಪೂರ್ವಕವಾಗಿ ಕ್ರಾಪ್​ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ರಹಸ್ಯ ಸಭೆ ಎಂದು ಬಿಂಬಿಸಿದ್ದಾರೆ. ಈ ರೀತಿಯ ಸುದ್ದಿಗಳಿಗೆ ನಾನು ಅಷ್ಟಾಗಿ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಜನರಿಗಾಗಿ ಕೆಲಸ ಮಾಡುವುದು ನಮ್ಮ ಆದ್ಯತೆಯಾಗಿದೆ. ಈ ರೀತಿಯ ಸುಳ್ಳು ಸುದ್ದಿಗಳಿಗೆ ಅಲ್ಲಾ ಎಂದು ಕಾಂಗ್ರೆಸ್​ ಸಂಸದ ಶಶಿ ತರೂರ್​ ವೈರಲ್​ ಫೋಟೋ ಕುರಿತು ಪ್ರತಿಕ್ರಿಯಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries