ಟೆಲ್ ಅವಿವ್: ಪ್ಯಾಲೆಸ್ಟೀನ್ನ ಮಿಲಿಟರಿ ದಾಳಿಯಿಂದಾಗಿ ಇಸ್ರೇಲ್ನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಸದ್ಯದ ಪರಿಸ್ಥಿತಿ ಉತ್ತಮವಾಗಿಲ್ಲ. ಆದರೆ, ಈ ಸಂಘರ್ಷದಲ್ಲಿ ಇಸ್ರೇಲ್ ಮೇಲುಗೈ ಸಾಧಿಸಲಿದೆ ಎಂದು ಇಸ್ರೇಲ್ನಲ್ಲಿರುವ ಭಾರತದ ರಾಯಭಾರಿ ನೌರ್ ಗಿಲೋನ್ ತಿಳಿಸಿದ್ದಾರೆ.

ಗಾಜಾ ಪಟ್ಟಿಯ ಹಮಾಸ್ ಉಗ್ರರು ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದಾರೆ.
ಇದರಿಂದ ದಕ್ಷಿಣ ಇಸ್ರೇಲ್ನಲ್ಲಿ 22 ಮಂದಿ ಮೃತಪಟ್ಟು 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇಸ್ರೇಲ್ಗೆ ಇದು ಅನಿರೀಕ್ಷಿತ ದಾಳಿಯಾಗಿದ್ದು, ಆ ದೇಶದ ಸೇನೆಯಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ.
ಇಸ್ರೇಲ್ ಆಕ್ರಮಣಕ್ಕೆ ಇತಿಶ್ರೀ ಹಾಡುತ್ತೇವೆ ಎಂದು ಹಮಾಸ್ ರಾಕೆಟ್ ದಾಳಿ ಮಾಡಿದೆ.
ಈ ನಡೆಗೆ ಕೆರಳಿರುವ ಇಸ್ರೇಲ್, ಗಾಜಾ ವಿರುದ್ಧ ಯುದ್ಧ ಘೋಷಣೆ ಮಾಡಿದೆ. ಬಾಂಬ್ ಸೆಲ್ಟರ್ಗಳಲ್ಲಿ ಆಶ್ರಯ ಪಡೆಯಿರಿ ಎಂದು ತನ್ನ ನಾಗರಿಕರಿಗೆ ಕರೆ ನೀಡಿದೆ.
ಹಮಾಸ್ ದಾಳಿಗೆ ದಕ್ಷಿಣ ಇಸ್ರೇಲ್ನಲ್ಲಿ ಡಿರೋಟ್ ಪ್ರದೇಶದಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೇಲ್ ಸೇನೆ, ಹಮಾಸ್ ಉಗ್ರರು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದೆ.