ಕಾಸರಗೋಡು : ಬೆಳಗಿನ ವಿಹಾರ ಸಂದರ್ಭ ಮನೆ ಸನಿಹ ವ್ಯಾನ್ ಡಿಕ್ಕಿಯಾಗಿ ಕಾಞಂಗಾಡು ಸೌತ್ ನಿವಾಸಿ, ಕಾಸರಗೋಡು ದೇಳಿ ಸಾದಿಯಾ ಶಾಲೆಯ ಚಿತ್ರಕಲಾ ಶಿಕ್ಷಕ ಶ್ಯಾಮ್ ಸುಧೀರ್ (58) ಮೃತಪಟ್ಟಿದ್ದಾರೆ. ಬುಧವಾರ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಸಂದರ್ಭ ವಿರುದ್ಧ ದಿಕ್ಕಿನಿಂದ ಆಗಮಿಸಿದ ವ್ಯಾನ್ ಡಿಕ್ಕಿಯಾಗಿತ್ತು.
ಗೋವಾ ಪ್ರವಾಸ ತೆರಳಿದ್ದ ತಂಡವೊಂದು ನೀಲೆಶ್ವರ ಭಾಗಕ್ಕೆ ವಾಪಸಾಗುತ್ತಿದ್ದ ವಾಹನ ಇದಾಗಿದ್ದು, ಕೆಎಸ್‍ಟಿಪಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಶ್ಯಾಮ್ ಸುಧೀರ್ ಜಿಲ್ಲೆಯ ಖ್ಯಾತ ಶಟಲ್ ಬ್ಯಾಡ್ಮಿಂಟನ್ ಆಟಗಾರರಾಗಿದ್ದು, ಕಾಞಂಗಾಡ್ ಶಟಲ್ ಕ್ಲಬ್ ಸದಸ್ಯ, ಕಾಞಂಗಾಡು ಮಾತೋತ್ ಪುದಿಯಭಗವತಿ ದೇವಸ್ಥಾನ ಸಮಿತಿಯ ಜತೆಕಾರ್ಯದರ್ಶಿಯಾಗಿದ್ದರು. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.


