ಕಾಸರಗೋಡು: ಕೊಲೆ ಪ್ರಕರಣವೊಮದರಲ್ಲಿ ಆರೋಪಿಯಾಗಿದ್ದ ಅಬ್ದುಲ್ ರಶೀದ್ ಅಲಿಯಾಸ್ ಸಮೋಸಾ ರಶೀದ್(34)ಕೊಲೆಪ್ರಕರಣಕ್ಕೆ ಸಂಬಂಧಿಸಿ ಈತನ ಸನೇಹಿತ ಕುಂಬಳೆ ಮಾವಿನಕಟ್ಟೆಯ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ಹಬೀಬ್ ಯಾನೆ ಬಹಬಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಹಬೀಬ್ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ಅಬ್ದುಲ್ ರಶೀದ್ ಜತೆ ಸಾರಣೆ ಕೆಲಸಕ್ಕೆ ತೆರಳುತ್ತಿದ್ದು, ಇಬ್ಬರೂ ಅನ್ಯೋನ್ಯತೆಯಿಂದಿದ್ದರು.
ನಂತರದ ದಿನಗಳಲ್ಲಿ ಕುಂಟಂಗೇರಡ್ಕದ ಮೈದಾನ ಸನಿಹಕ್ಕೆ ತೆರಳಿ ಮದ್ಯ, ಗಾಂಜಾ ಸೇವನೆಯಲ್ಲೂ ತೊಡಗಿಸಿಕೊಳ್ಳುತ್ತಿದ್ದರೆನ್ನಲಾಗಿದೆ. ಹಲವು ಬಾರಿ ಪರಸ್ಪರ ಹೊಡೆದಾಡಿಕೊಂಡು, ನಂತರ ಸ್ನೇಹದಿಂದ ಇರುತ್ತಿದ್ದರು. ಭಾನುವಾರವೂ ಮದ್ಯ ಸೇವಿಸಿ ಇಬ್ಬರೂ ಜಗಳವಾಡಿದ್ದು, ಹಬೀಬ್ ಅಬ್ದುಲ್ ರಶೀದ್‍ನನ್ನು ಜೋರಾಗಿ ತಳ್ಳಿದ ಪರಿಣಾಮ ತಲೆ ಕಲ್ಲಿಗೆ ಬಡಿದು ಗಂಭೀರ ಗಾಯಗಳುಂಟಾಗಿತ್ತು. ನಂತರ ಇದೇ ಕಲ್ಲನ್ನು ತಲೆಗೆ ಎತ್ತಿಹಾಕಿ ಕೊಲೆಗೈದಿದ್ದನು. ಮೃತದೇಹವನ್ನು ಕಾಲಲ್ಲಿ ಹಿಡಿದೆಳೆದು ಕುರುಚಲು ಪೊದೆಯ ಸಂದಿಗೆ ಎಸೆದಿರುವುದಾಗಿ ಪೊಲೀಸರಲ್ಲಿ ತಿಳಿಸಿದ್ದನು.
2019 ಅಕ್ಟೋಬರ್ 18ರಂದು ಕೊಲೆಯಾಗಿರುವ ಮಧೂರು ಪಟ್ಲ ನಿವಾಸಿ ಶೈನ್ ಯಾನೆ ಶಾನು(24)ಕೊಲೆ ಪ್ರಕರಣದಲ್ಲಿ ಅಬ್ದುಲ್ ರಶೀದ್ ಆರೋಪಿಯಾಗಿದ್ದನು.

