ಕುಂಬಳೆ: ಕುಂಬಳೆ ಸನಿಹದ ನಾರಾಯಣಮಂಗಲದಲ್ಲಿ ಸಕುಟರ್, ಖಾಸಗಿ ಬಸ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಉಪ್ಪಳ ಸೋಂಕಾಲು ಕೊಡಂಗೆ ರಸ್ತೆಯ ನಿವಾಸಿ ಮಹಮೂದ್ ಎಂಬವರ ಪುತ್ರ ಇಬ್ರಾಹಿಂ ಖಲೀಲ್ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರ ಹಿಂಬದಿ ಸವಾರ ಮಹಮ್ಮದ್ ಮಾಝಿನ್(240ಎಂಬವರು ಗಂಭೀರ ಗಾಯಗೊಂಡಿದ್ದು, ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಭಾನುವಾರ ರಾತ್ರಿ ನಾರಾಯಣಮಂಗಲದಲ್ಲಿ ಅಪಘಾತವುಂಟಾಗಿತ್ತು.

