ಕಾಸರಗೋಡು: ರಾಜಸ್ಥಾನದಲ್ಲಿ ಬಂಧಿತನಾಗಿರುವ ಐಸಿಸ್ ಉಗ್ರ ಶಹನವಸ್ ಅಲಿಯಾಸ್ ಶಾಫಿ ಉಸಾಮು ಕಾಸರಗೋಡು ಮತ್ತು ಕಣ್ಣೂರಿಗೂ ಸಂದರ್ಶಿಸಿದ್ದನೆಂಬ ಮಾಹಿತಿ ಲಭಿಸಿದೆ. ಕೇರಳದ ಪಶ್ಚಿಮ ಘಟ್ಟಕ್ಕೆ ಸೇರಿದ ಪ್ರದೇಶಗಳಲ್ಲಿ ಐಸಿಸ್ ಸಂಘಟನೆಯ ಧ್ವಜ ಸ್ಥಾಪಿಸಿ, ಅಲ್ಲಿನ ಫೋಟೋ ತೆಗೆಸಿಕೊಂಡಿರುವ ಬಗ್ಗೆ ಎನ್‍ಐಎಗೆ ಮಾಹಿತಿ ಲಭಿಸಿದೆ.ಈ ಫೊಟೋಗಳನ್ನು ಎನ್‍ಐಎ ವಶಪಡಿಸಿಕೊಂಡಿದೆ. ಈತ ಕೇರಳದ ವಿವಿಧೆಡೆ ಬಾಂಬ್ ಸಪೋಟಕ್ಕೆ ಸಂಚು ರೂಪಿಸಿರುವುದನ್ನೂ ಎನ್‍ಐಎ ಪತ್ತೆಹಚ್ಚಿತ್ತು. ಕೇರಳದಲ್ಲಿ 2016ರಿಂದ ಐಸಿಸ್ ಸಂಪರ್ಕ ಪಡೆದಿದ್ದ ಹಲವು ಮಂದಿ ನಿಗೂಢವಾಗಿ ನಾಪತ್ತೆಯಾಗಿದ್ದು, ಇವರೆಲ್ಲರೂ ಐಸಿಸ್ ಯುದ್ಧಕೇಂದ್ರ ಸಿರಿಯಾ, ಅಫ್ಘಾನಿಸ್ತಾನಕ್ಕೆ ತಲುಪಿರುವುದು ತನಿಖೆಯಿಂದ ಮಾಹಿತಿ ಲಭಿಸಿತ್ತು.


